ಪ್ರಯಾಣಿಕರಿಗೆ ಗುಡ್ ನ್ಯೂಸ್ : ʻBMTCʼಯಿಂದ ಹೆಚ್ಚುವರಿ ಬಸ್ ಸಂಚಾರಕ್ಕೆ ಚಾಲನೆ

ಬೆಂಗಳೂರು : ಬೆಂಗಳೂರಿನ ಬಿಎಂಟಿಸಿ ಪ್ರಯಾಣಿಕರಿಗೆ ಸಿಹಿಸುದ್ದಿ, ಬಿಎಂಟಿಸಿಯಿಂದ ವಿವಿಧ ಮಾರ್ಗದಲ್ಲಿ ಹೆಚ್ಚುವರಿ ಬಸ್  ಸಂಚಾರಕ್ಕೆ ಚಾಲನೆ ನೀಡಲಾಗಿದೆ.

ಸರ್ಜಾಪುರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ಸರ್ಜಾಪುರ, ದೊಡ್ಡಕನ್ನಲ್ಲಿ, ಬೆಳ್ಳಂದೂರು ಗೇಟ್‌, ಸರ್ಜಾಪುರ ರಸ್ತೆ ಜಂಕ್ಷನ್‌, ಮಾರತ್‌ಹಳ್ಳಿ ಸೇತುವೆ, ಹೆಬ್ಬಾಳ ಮಾರ್ಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿತ್ಯ 4 ವಾಯುವಜ್ರ ಬಸ್‌ಗಳು 14 ಟ್ರಿಪ್‌ ಸಂಚರಿಸಲಿವೆ.

ಸರ್ಜಾಪುರದಿಂದ ದೊಡ್ಡಕನ್ನಲ್ಲಿ, ಬೆಳ್ಳಂದೂರು ಗೇಟ್‌, ಸರ್ಜಾಪುರ ರಸ್ತೆ ಜಂಕ್ಷನ್‌, ಮಾರತ್‌ಹಳ್ಳಿ ಬ್ರಿಡ್ಜ್‌ ಮಾರ್ಗವಾಗಿ ಹೆಬ್ಬಾಳಕ್ಕೆ 4 ವಜ್ರ ಬಸ್‌ಗಳು ನಿತ್ಯ 16 ಟ್ರಿಪ್‌ ಹಾಗೂ ಶಿವಾಜಿನಗರದಿಂದ ಶಾಂತಿನಗರ, ಹುಳಿಮಾವು ಮಾರ್ಗವಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ 4 ವಜ್ರ ಬಸ್‌ಗಳು ನಿತ್ಯ 30 ಟ್ರಿಪ್‌ ಸಂಚರಿಸಲಿದೆ.

ಸಾಮಾನ್ಯ ಸಾರಿಗೆ ಬಸ್‌ಗಳು ಸರ್ಜಾಪುರ ಬಸ್‌ ನಿಲ್ದಾಣ, ಹೆಬ್ಬಾಳ, ದೊಮ್ಮಸಂದ್ರ, ಕೊಡತಿ ಗೇಟ್‌, ದೊಡ್ಡಕನ್ನಲ್ಲಿ, ಕಾಡುಬೀಸನಹಳ್ಳಿ, ಮಾರತ್‌ಹಳ್ಳಿ ಬ್ರಿಡ್ಜ್‌ ಹಾಗೂ ಶಿವಾಜಿನಗರ ಬಸ್‌ ನಿಲ್ದಾಣ, ಬನ್ನೇರುಘಟ್ಟ ನ್ಯಾಷನಲ್‌ ಪಾರ್ಕ್‌, ಶಾಂತಿನಗರ ಟಿಟಿಎಂಸಿ, ಡೇರಿ ಸರ್ಕಲ್‌, ಗುರುಪ್ಪನಪಾಳ್ಯ, ಗೊಟ್ಟಿಗೆರೆ ಮಾರ್ಗದಲ್ಲಿ ಸಂಚರಿಸಲಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read