ಬಿಪಿಎಲ್ ಕುಟುಂಬದವರಿಗೆ ಗುಡ್ ನ್ಯೂಸ್: ಉಚಿತ MRI ಸ್ಕ್ಯಾನ್, ಆಸ್ಪತ್ರೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಯಂತ್ರ ಅಳವಡಿಕೆ

ಬೆಂಗಳೂರು: ಆರೋಗ್ಯ ಇಲಾಖೆ ವತಿಯಿಂದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಿ ಗುಣಮಟ್ಟದ ಸೇವೆ ನೀಡಲು, ರೋಗಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಿಟಿ ಸ್ಕ್ಯಾನ್ ಮತ್ತು ಎಂ.ಆರ್.ಐ. ಸ್ಕ್ಯಾನ್ ಗಳನ್ನು ಅಳವಡಿಸಲಾಗುವುದು.

ಐದು ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್, 15 ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕ್ಯಾನ್ ಸೇವೆ ಆರಂಭಿಸಲು ಸರ್ಕಾರ ಅನುಮೋದನೆ ನೀಡಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ 5 ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಮತ್ತು 15 ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕ್ಯಾನ್ ಆರಂಭಿಸಲಾಗಿದೆ. ಎರಡನೇ ಹಂತದಲ್ಲಿ 222.28 ಕೋಟಿ ರೂ.ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಉಚಿತ ರೋಗ ನಿರ್ಣಯ ಸೇವೆಗಳಡಿ ಇದನ್ನು ಜಾರಿ ಮಾಡಲಾಗುವುದು.

ಮೈಸೂರು, ಚಿತ್ರದುರ್ಗ ಜಿಲ್ಲಾಸ್ಪತ್ರೆ, ಮಂಗಳೂರಿನ ವೆನ್ ಲಾಕ್, ಬೆಂಗಳೂರಿನ ಸಿ.ವಿ. ರಾಮನ್, ಕೆ.ಸಿ. ಜನರಲ್ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯ ಕಲ್ಪಿಸಲಾಗುವುದು. ಚಿಕ್ಕಮಗಳೂರು, ದಾವಣಗೆರೆ, ಬಾಗಲಕೋಟೆ, ರಾಮನಗರ, ಹಾವೇರಿ, ಧಾರವಾಡ, ಯಾದಗಿರಿ, ಮೈಸೂರು, ಚಿಕ್ಕೋಡಿ, ಅರಸೀಕೆರೆ ಸಾರ್ವಜನಿಕ ಆಸ್ಪತ್ರೆಗಳು, ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆ, ಸಿ.ವಿ. ರಾಮನ್, ಕೆ.ಸಿ. ಜನರಲ್ ಸಾರ್ವಜನಿಕ ಆಸ್ಪತ್ರೆಗಳಲ್ಲಿ, ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕ್ಯಾನ್ ಸೇವೆ ಆರಂಭಿಸಲಾಗುವುದು.

ಅಗತ್ಯವಿಲ್ಲದಿದ್ದರೂ ಅನೇಕ ಬಾರಿ ಸ್ಕ್ಯಾನ್ ಮಾಡಿಸುವುದನ್ನು ತಪ್ಪಿಸಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಡಿ ಇದನ್ನು ತರಲಾಗಿದ್ದು, ಸರಿಯಾದ ಮೌಲ್ಯಮಾಪನ ಮಾಡಿ ಸ್ಕ್ಯಾನ್ ಗೆ ಅನುಮೋದನೆ ನೀಡಲಾಗುವುದು.

ಬಿಪಿಎಲ್ ಕುಟುಂಬಗಳಿಗೆ ಉಚಿತ ಸೌಲಭ್ಯ ಕಲ್ಪಿಸಲಾಗುವುದು. ಸಿಟಿ ಸ್ಕ್ಯಾನ್ ಗೆ 1,550 ರೂ.,ಎಂಆರ್‌ಐ ಸ್ಕ್ಯಾನ್ ಗೆ 3,000 ರೂ. ನಿಗದಿಪಡಿಸಲಾಗಿದೆ. ಎಪಿಎಲ್ ಕಾರ್ಡ್ ಹೊಂದಿದವರಿಗೆ ಶೇ. 70ರಷ್ಟು ಶುಲ್ಕ ನಿಗದಿ ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read