ನವದೆಹಲಿ: ಪ್ರಸಕ್ತ ವರ್ಷದ ಆರಂಭದಿಂದ ಎರಡು ಬಾರಿ ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡುವ ಮೂಲಕ ಸಾಲಗಾರರಿಗೆ ರಿಲೀಫ್ ನೀಡಿರುವ ಆರ್ಬಿಐ ಈ ವಾರ ಮತ್ತೊಂದು ಸುತ್ತಿನಲ್ಲಿ ರೆಪೊ ದರ ಕಡಿತಗೊಳಿಸುವ ಸಾಧ್ಯತೆ ಇದೆ.
ಜೂನ್ 6 ರಂದು ನಡೆಯಲಿರುವ ಆರ್.ಬಿ.ಐ. ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ರೆಪೊ ದರವನ್ನು ಶೇಕಡ 50ರಷ್ಟು ಕಡಿತಗೊಳಿಸುವ ನಿರೀಕ್ಷೆ ಇದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವರದಿ ತಿಳಿಸಿದೆ.
ಪ್ರಸ್ತುತ ಬ್ಯಾಂಕಿಂಗ್ ವಲಯದಲ್ಲಿ ದ್ರವ್ಯತೆ ಹೆಚ್ಚಾಗಿದ್ದು, ಚಿಲ್ಲರೆ ಹಣದುಬ್ಬರ ಮಟ್ಟ ಇಳಿಮುಖವಾಗುತ್ತಿದೆ. ಇದರಿಂದ ಬಡ್ಡಿ ದರ ಇಳಿಕೆ ನಿರೀಕ್ಷಿತ ಎಂದು ಹೇಳಲಾಗಿದೆ.
ಇದರೊಂದಿಗೆ ಕಳೆದ ಫೆಬ್ರವರಿಯಿಂದದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೂರನೇ ಬಾರಿ ಬಡ್ಡಿ ದರ ಇಡಿಸಿದಂತಾಗುತ್ತದೆ. ಫೆಬ್ರವರಿ ಮತ್ತು ಏಪ್ರಿಲ್ ನಲ್ಲಿ ತಲಾ ಶೇಕಡ 0.25 ರಷ್ಟು ರೆಪೊ ದರ ಇಳಿಕೆ ಮಾಡಲಾಗಿತ್ತು.