ಸಾಲಗಾರರಿಗೆ ಗುಡ್ ನ್ಯೂಸ್: ಬಡ್ಡಿ ದರ ಭಾರಿ ಇಳಿಕೆ ಸಾಧ್ಯತೆ

ನವದೆಹಲಿ: ಪ್ರಸಕ್ತ ವರ್ಷದಲ್ಲಿ ಈಗಾಗಲೇ ಎರಡು ಸಲ ಸಾಲಗಾರರಿಗೆ ಆರ್‌ಬಿಐ ರಿಲೀಫ್ ನೀಡಿದೆ. 2025 ನೇ ಸಾಲಿನಲ್ಲಿ ಬಡ್ಡಿ ದರವನ್ನು ಮತ್ತಷ್ಟು ಇಳಿಕೆ ಮಾಡುವ ನಿರೀಕ್ಷೆ ಇದೆ. ಹಣದುಬ್ಬರ ದಾಖಲೆಯ ಮಟ್ಟಕ್ಕೆ ಇಳಿಕೆಯಾಗಿದ್ದು, ಜಿಡಿಪಿಯ ಮಂದಗತಿ ಬೆಳವಣಿಗೆ ಹಿನ್ನೆಲೆಯಲ್ಲಿ ಈ ವರ್ಷ ರೆಪೊ ದರವನ್ನು ಶೇ. 1.50 ರಷ್ಟು ಇಳಿಸಬಹುದೆಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆರ್ಥಿಕ ಸಂಶೋಧನಾ ಇಲಾಖೆ ವರದಿಯಲ್ಲಿ ಅಂದಾಜಿಸಿದೆ.

ಫೆಬ್ರವರಿ ಮತ್ತು ಏಪ್ರಿಲ್ ನಲ್ಲಿ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಸಮಿತಿಯಲ್ಲಿ ರೆಪೊ ದರವನ್ನು ತಲಾ ಶೇಕಡ 0.25 ರಷ್ಟು ಇಳಿಕೆ ಮಾಡಲಾಗಿತ್ತು. ಜೂನ್ ಮತ್ತು ಆಗಸ್ಟ್ ನಲ್ಲಿಯೂ ಆರ್.ಬಿ.ಐ. ಇದೇ ಕ್ರಮವನ್ನು ಅನುಸರಿಸುವ ನಿರೀಕ್ಷೆ ಇದೆ. ಜೂನ್ ನಲ್ಲಿ ಶೇಕಡ 0.75 ರಷ್ಟು, ಅಗಸ್ಟ್ ನಲ್ಲಿ ಶೇಕಡ 0.50 ರಷ್ಟು ರೆಪೊ ದರ ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

  • ಹೌದು (53%, 106 Votes)
  • ಇಲ್ಲ (38%, 77 Votes)
  • ಹೇಳಲಾಗುವುದಿಲ್ಲ (9%, 18 Votes)

Total Voters: 201

Loading ... Loading ...

Most Read