GOOD NEWS : ಬೆಂಗಳೂರಿಗರಿಗೆ ಗುಡ್ ನ್ಯೂಸ್ :  ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಶುದ್ದ ಕುಡಿಯುವ ‘ಕಾವೇರಿ ನೀರು’.!

ಬೆಂಗಳೂರು : ಬೆಂಗಳೂರು ನಗರದಲ್ಲಿ ನೀರಿನ ಕೊರತೆಯನ್ನು ನೀಗಿಸಲು ಜಲಮಂಡಳಿಯ ʼಸಂಚಾರಿ ಕಾವೇರಿʼ (ಕಾವೇರಿ ಆನ್ ವೀಲ್ಸ್) ಆ್ಯಪ್ ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

ಬೇಸಿಗೆಯಲ್ಲಿ ನೀರಿನ ಕೊರತೆ ಹೆಚ್ಚುತ್ತದೆ. ಇದರ ಲಾಭ ಪಡೆಯಲು ಖಾಸಗಿ ಟ್ಯಾಂಕರ್ಗಳ ಮಾಲೀಕರು ನೀರಿನ ದರ ಹೆಚ್ಚಿಸಿ, ಜನರಿಂದ ದುಬಾರಿ ದರ ವಸೂಲಿ ಮಾಡುತ್ತಾರೆ. ಇದಕ್ಕೆ ಕಡಿವಾಣ ಹಾಕುವುದಕ್ಕಾಗಿಯೇ ಜಲಮಂಡಳಿಯು ಈ ಯೋಜನೆಯು ಜಾರಿ ಮಾಡುತ್ತಿದೆ. ಈ ತಿಂಗಳ ಅಂತ್ಯಕ್ಕೆ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.

110 ಹಳ್ಳಿಗಳ ವ್ಯಾಪ್ತಿಯೂ ಒಳಗೊಂಡಂತೆ ಬೆಂಗಳೂರು ನಗರದಲ್ಲಿ ಟ್ಯಾಂಕರ್‌ಗಳ ಮೇಲೆ ಅವಲಂಬಿತರಾಗಿರುವ ಜನರಿಗೆ ಉತ್ತಮ ನೀರನ್ನು ಒದಗಿಸುವುದು ನಮ್ಮ ಮುಖ್ಯ ಗುರಿಯಾಗಿದೆ. ಆ ಕಾರಣಕ್ಕಾಗಿ ಸಂಚಾರಿ ಕಾವೇರಿ ಯೋಜನೆ ಆರಂಭಿಸುತ್ತಿದ್ದೇವೆ. ಸದ್ಯ 6,000 ಲೀಟರ್‌ ಮತ್ತು 12,000 ಲೀಟರ್‌ ಸಾಮರ್ಥ್ಯದ ಟ್ಯಾಂಕರ್‌ಗಳಿವೆ. ಗ್ರಾಹಕರ ಬೇಡಿಕೆ ಆಧರಿಸಿ, ನೀರು ಪೂರೈಕೆದಾರರನ್ನು ಸಂಪರ್ಕಿಸಿ ಬೇರೆ ಬೇರೆ ಸಾಮರ್ಥ್ಯದ ಟ್ಯಾಂಕರ್‌ಗಳನ್ನು ನಿಯೋಜಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷರಾದ ರಾಮ್‌ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ಬಿಐಎಸ್ ಪ್ರಮಾಣಿತ ಶುದ್ಧ ನೀರನ್ನು, BWSSB ಟ್ಯಾಂಕರ್ಗಳ ಮೂಲಕ ಬೆಂಗಳೂರಿನ ಮನೆಮನೆಗೆ ಒದಗಿಸುವ ವಿನೂತನವಾದ ಯೋಜನೆಯೇ ಸಂಚಾರಿ ಕಾವೇರಿ. ಇದರ ಪ್ರಯೋಜನಗಳು, ಸಮರ್ಪಕ ಕಾರ್ಯನಿರ್ವಹಣೆಗೆ ಕೈಗೊಂಡ ಕ್ರಮಗಳ ವಿವರಗಳು ಇಲ್ಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read