2025-26ನೇ ಸಾಲಿಗೆ ರಾಜ್ಯದಲ್ಲಿ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಭಾರತ ಸರ್ಕಾರದ ವಾರ್ಷಿಕ MGNREGA ಮಾರ್ಗಸೂಚಿಯನ್ವಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪೌಷ್ಠಿಕ ಪುನಶ್ವೇತನ ಕೇಂದ್ರಗಳಲ್ಲಿ ದಾಖಲಾದ ಮಕ್ಕಳ ತಾಯಂದಿರು/ಪೋಷಕರಿಗೆ ದಿನಗೂಲಿ ನಷ್ಟಭತ್ಯೆಯನ್ನು ನೀಡಲಾಗುವುದು.
ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನದ ಏಕ ಕಡತದಲ್ಲಿ ಪೌಷ್ಠಿಕ ಪುನಶ್ವೇತನ ಕೇಂದ್ರವು(NRC) ಸಾರ್ವಜನಿಕ ಆರೋಗ್ಯ ಸಂಸ್ಥೆಯ (ಆಸ್ಪತ್ರೆ) ಘಟಕವಾಗಿದ್ದು, ಇಲ್ಲಿ ತೀವು ಅಪೌಷ್ಠಿಕತೆ (SAM) ಹೊಂದಿರುವ ಮಕ್ಕಳನ್ನು ದಾಖಲಿಸಿ ಅಪೌಷ್ಠಿಕತೆಯನ್ನು ನೀಗಿಸಲು ಸೇವೆ ನೀಡಲಾಗುತ್ತಿದೆ. ಮಕ್ಕಳನ್ನು ಪೌಷ್ಠಿಕ ಪುನಶ್ಯತನ ಕೇಂದ್ರಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿರುವ SD Chart-ಪ್ರವೇಶ ಮಾನದಂಡಗಳ ಪ್ರಕಾರ ದಾಖಲಿಸಿ, ವೈದ್ಯಕೀಯ ಮತ್ತು ಪೌಷ್ಠಿಕ ಚಿಕಿತ್ಸಕ ಆರೈಕೆಯನ್ನು ಒದಗಿಸಲಾಗುತ್ತದೆ.
ರಾಜ್ಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಅನುದಾನಿತ 33 ಜಿಲ್ಲಾ ಮಟ್ಟದ ಪೌಷ್ಠಿಕ ಪುನಶ್ವೇತನ ಕೇಂದ್ರಗಳು ಮತ್ತು ರಾಜ್ಯ ಅನುದಾನಿತ 86 ತಾಲೂಕು ಮಟ್ಟದ ಪೌಷ್ಠಿಕ ಪುನಶ್ಯತನ ಕೇಂದ್ರಗಳು 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪೌಷ್ಠಿಕತೆಯುಳ್ಳ ಮಕ್ಕಳಿಗೆ ಪೌಷ್ಠಿಕ ಪುನಶ್ಚೇತನ ಸೇವೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಒದಗಿಸಲಾಗುತ್ತಿದೆ.
ಅಪೌಷ್ಠಿಕತೆ ಹೊಂದಿರುವ ಪ್ರತಿ ಮಗುವಿಗೆ ಮತ್ತು NRCಗೆ ದಾಖಲಾದ ಮಗುವಿನ ತಾಯಿ/ಪೋಷಕರಿಗೆ ಈ ಕೆಳಗಿನ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
ದಿನ ಒಂದಕ್ಕೆ ಪ್ರತಿ ಮಗುವಿಗೆ ಔಷಧಿಗಾಗಿ – ರೂ.125/-
ದಿನ ಒಂದಕ್ಕೆ ಪ್ರತಿ ಮಗುವಿಗೆ ಆಹಾರಕ್ಕಾಗಿ ರೂ.125/-
ದಿನ ಒಂದಕ್ಕೆ ಮಗುವಿನ ತಾಯಿ/ಪೋಷಕರ ಆಹಾರಕ್ಕಾಗಿ – ರೂ.100/-.
2025ರ MGNREGA ಮಾನದಂಡಗಳ ಅನುಸಾರ ದಿನ ಒಂದಕ್ಕೆ ಮಗುವಿನ ತಾಯಿ/ಪೋಷಕರಿಗೆ ವೇತನ ನಮ್ಮ ಪರಿಹಾರ ಭತ್ಯೆಗಾಗಿ – ರೂ. 370/-
ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಅಡಿಯಲ್ಲಿ 2025-26ನೇ ಸಾಲಿಗೆ ಅನುಮೋದಿತ RoP ಪ್ರಕಾರ, ಜಿಲ್ಲಾ ಪೌಷ್ಠಿಕ ವುನಶ್ವೇತನ ಕೇಂದ್ರಗಳಲ್ಲಿ (NRCs) ದಾಖಲಾಗುವ ಮಕ್ಕಳ ತಾಯಂದಿರಿಗೆ/ಪೋಷಕರಿಗೆ ದಿನಕ್ಕೆ ರೂ.100/- ವೇತನ ನಮ್ಮ ದಿನಗೂಲಿ ಪರಿಹಾರ ಭತ್ಯೆ ಅನುಮೋದಿಸಿದೆ.

