ಶುಭ ಸುದ್ದಿ: ‘ಸರ್ವರಿಗೂ ಸೂರು’ ಒದಗಿಸಲು 4 ಯೋಜನೆ ಜಾರಿ: ಸೈಟ್, ಮನೆ ಇಲ್ಲದವರಿಗೆ ವಸತಿ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನ

ಭಾರತ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆ(ನಗರ)-2.0 ರ ಅಡಿಯಲ್ಲಿ ಸರ್ವರಿಗೂ ಸೂರು ಒದಗಿಸಲು ದಿನಾಂಕ 01.09.2024 ರಿಂದ ಅನ್ವಯವಾಗುವಂತೆ ಈ ಕೆಳಕಂಡ ನಾಲ್ಕು ಯೋಜನೆಗಳನ್ನು ಜಾರಿಗೊಳಿಸಿದ್ದು, ಸ್ವಂತ ನಿವೇಶನ ಹೊಂದಿರುವ/ ಕಚ್ಚಾ ಮನೆ ಹೊಂದಿರುವವರು ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರವು Unified web portal https//pmay.urban.gov.in ದಲ್ಲಿ ಅರ್ಜಿ ಆಹ್ವಾನಿಸಿದ್ದು, ಜು.15 ರೊಳಗಾಗಿ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

 Beneficiary Led Construction(BLC)(ಫಲಾನುಭವಿ ನೇತೃತ್ವದ ನಿರ್ಮಾಣ ವಸತಿ ಯೋಜನೆ),

Affordable Housing in Partnership(AHP)(ಪಾಲುದಾರಿಕೆಯಲ್ಲಿ ಕೈಗೆಟಕುವ ಬಹು ಮಹಡಿ ವಸತಿ ಯೋಜನೆ)

Affordable Rental Housing(ARH)(ಕೈಗೆಟಕುವ ಬಾಡಿಗೆ ವಸತಿ ಯೋಜನೆ),

Interest Subsidy Scheme(ISS)(ಬಡ್ಡಿ ಸಹಾಯಧನ ವಸತಿ ಯೋಜನೆ)

ನಿವೇಶನ ರಹಿತರು ಮತ್ತು ವಸತಿ ರಹಿತರು ಈ ಕೆಳಗಿನಂತೆ ಅರ್ಹತೆಯನ್ನು ಹೊಂದಿರಬೇಕು.

ಫಲಾನುಭವಿಯು ವಿವಾಹಿತ ಮಹಿಳೆ ಅಥವಾ ಏಕ ಮಹಿಳಾ ಒಡೆತನದ ಗೃಹಿಣಿಯಾಗಿರಬೇಕು. ಇವರನ್ನು ಹೊರತುಪಡಿಸಿ ಪುರುಷರಾಗಿದ್ದಲ್ಲಿ ಮಾಜಿ ಯೋಧರು, ವಿಧುರರು, ಅಂಗವಿಕಲರು, ಹಿರಿಯ ನಾಗರೀಕರು, ವಿಚ್ಛೇದಿತರು ಅರ್ಹರಾಗಿರುತ್ತಾರೆ. ಫಲಾನುಭವಿಯ ಕುಟುಂಬದ ವಾರ್ಷಿಕ ಆದಾಯವು ಆರ್ಥಿಕ ದುರ್ಬಲ ವರ್ಗದವರು 3 ಲಕ್ಷದೊಳಗೆ, ಕಡಿಮೆ ಆದಾಯ ವರ್ಗದವರು 3 ಲಕ್ಷದಿಂದ 6 ಲಕ್ಷದೊಳಗೆ, ಮಧ್ಯಮ ಆದಾಯ ವರ್ಗದವರು 6 ಲಕ್ಷದಿಂದ 9 ಲಕ್ಷದೊಳಗೆ ಆದಾಯ ಹೊಂದಿರಬೇಕು.

ರಾಜ್ಯ ಮತ್ತು ಕೇಂದ್ರ ಸರ್ಕಾರದ ಬೇರೆ ಯಾವುದೇ ಯೋಜನೆ/ಇಲಾಖೆಯಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆಯ್ಕೆಯಾಗಿ 20 ವರ್ಷದಿಂದ ವಸತಿ ಯೋಜನೆಯಡಿಯಲ್ಲಿ ಸಹಾಯಧನ ಪಡೆದು ಮನೆ ನಿರ್ಮಾಣ ಮಾಡಿಕೊಂಡಿರಬಾರದು. ಅರಕಲಗೂಡು ಪಟ್ಟಣ ವ್ಯಾಪ್ತಿಯಲ್ಲಿ ದಿನಾಂಕ:01.09.2024ರ ರೊಳಗೆ ವಾಸವಿರುವ ಫಲಾನುಭವಿಗಳು ಸಮೀಕ್ಷೆಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ರಾಜ್ಯದ ಯಾವುದೇ ಭಾಗದಲ್ಲಿ ನಿವೇಶನ ಅಥವಾ ವಸತಿ ಹೊಂದಿರದ ಕುಟುಂಬವನ್ನು ನಿವೇಶನ ರಹಿತರು ಎಂದು ಪರಿಗಣಿಸಲಾಗುವುದು.

ರಾಜ್ಯದ ಯಾವುದೇ ಭಾಗದಲ್ಲಿ ಪಕ್ಕಾ ಮನೆಯನ್ನು ಹೊಂದಿರದ, ಆದಾಗ್ಯೂ ನಿವೇಶನ ಹೊಂದಿರುವ/ ಕಚ್ಚಾಮನೆಯನ್ನು ಹೊಂದಿರುವ ಕುಟುಂಬವನ್ನು ವಸತಿ ರಹಿತ ಕುಟುಂಬವೆAದು ಪರಿಗಣಿಸಲಾಗುವುದು. ಫಲಾನುಭವಿಯು ಸ್ವಂತ ನಿವೇಶನ ಹೊಂದಿದ್ದಲ್ಲಿ, ನಿವೇಶನಕ್ಕೆ ಸಂಬಂಧಿಸಿದಂತೆ ಹಕ್ಕುಪತ್ರ/ ಕ್ರಯಪತ್ರ/ ದಾನಪತ್ರ/ ಉಡುಗೊರೆ ಪತ್ರ/ ಖಾತಾ ಪತ್ರಗಳನ್ನು ಹೊಂದಿರಬೇಕು. ಈ ಹಿಂದೆ ಪ್ರಧಾನ ಮಂತ್ರಿ ಆವಾಸ್ ನಗರ ಯೋಜನೆಯಡಿಯಲ್ಲಿ ಆಯ್ಕೆಯಾಗಿ ಮನೆ ನಿರ್ಮಿಸದೇ, ದಿನಾಂಕ:31.12.2023 ರ ನಂತರ ಕೇಂದ್ರ ಸರ್ಕಾರದಿಂದ ಮನೆ ರದ್ದಾದ ಫಲಾನುಭವಿಗಳು ಸಮೀಕ್ಷೆಯಡಿಯಲ್ಲಿ ಅರ್ಜಿ ಸಲ್ಲಿಸಲು ಅನರ್ಹರಾಗಿರುತ್ತಾರೆ.

ಅರ್ಜಿದಾರರು ಸಲ್ಲಿಸಬೇಕಾದ ದಾಖಲೆಗಳು:

 ಅರ್ಜಿದಾರರ ಇತ್ತೀಚಿನ 2 ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿ, ಕುಟುಂಬ ಸದಸ್ಯರುಗಳ ಆಧಾರ್ ಕಾರ್ಡ್ ಪ್ರತಿ. ಅರ್ಜಿದಾರರು ವಸತಿ ರಹಿತರಾಗಿದ್ದಲ್ಲಿ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು(ಹಕ್ಕುಪತ್ರ/ಕ್ರಯಪತ್ರ/ ದಾನಪತ್ರ/ಉಡುಗೊರೆ ಪತ್ರ/ ಖಾತಾ ಪತ್ರ) ಸಲ್ಲಿಸುವುದು. ಇತ್ತೀಚಿನ ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಪಡಿತರ ಚೀಟಿ, ಬ್ಯಾಂಕ್ ಖಾತೆಯ ವಿವರ, ಪಾನ್‌ಕಾರ್ಡ್ ಸಲ್ಲಿಸುವುದು. ಅರ್ಜಿದಾರರ ಹೆಸರಲ್ಲಿ (ಪತಿ/ಪತ್ನಿ) ಅವಿವಾಹಿತ ಮಗ/ ಅವಿವಾಹಿತ ಮಗಳು ಹೆಸರಲ್ಲಿ ಸ್ವಂತ ಮನೆ ಹೊಂದಿಲ್ಲ ಎಂಬುದರ ಬಗ್ಗೆ ರೂ.100 ಛಾಪಾ ಕಾಗದದಲ್ಲಿ ಸ್ವಯಂ ದೃಢೀಕೃತ ಪತ್ರ ನೀಡುವುದು. ಆಸ್ತಿಯು ಅರ್ಜಿದಾರರ ಹಾಗೂ ಕುಟುಂಬ ಸದಸ್ಯರ ಜಂಟಿ ಖಾತೆ ಹೊಂದಿದ್ದಲ್ಲಿ ರೂ.100 ಛಾಪಾ ಕಾಗದದಲ್ಲಿ ಯಾವುದೇ ತಂಟೆ-ತಕರಾರು ಇಲ್ಲದಿರುವ ಬಗ್ಗೆ ಒಪ್ಪಿಗೆ ಪತ್ರವನ್ನು ನೀಡಲು ಸಕಲೇಶಪುರ ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read