GOOD NEWS : ಇನ್ಮುಂದೆ ಮನೆ ಬಾಗಿಲಲ್ಲೇ ಸಿಗಲಿದೆ ‘ಆರೋಗ್ಯ ಸೇವೆ’ : ‘ಗೃಹ ಆರೋಗ್ಯ ಯೋಜನೆ’ ರಾಜ್ಯಾದ್ಯಂತ ವಿಸ್ತರಿಸಿ ಸರ್ಕಾರದಿಂದ ಅಧಿಕೃತ ಆದೇಶ

ಬೆಂಗಳೂರು : ‘ಗೃಹ ಆರೋಗ್ಯ ಯೋಜನೆ’ ರಾಜ್ಯಾದ್ಯಂತ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.
2025-26ನೇ ಸಾಲಿನ ಆಯವ್ಯಯ ಖಂಡಿಕೆ 143 ರಲ್ಲಿ ಘೋಷಿಸಿರುವಂತೆ ಗೃಹ ಆರೋಗ್ಯ ಯೋಜನೆಯ ಕಾರ್ಯಕ್ರಮವನ್ನು ಹೆಚ್ಚುವರಿ ಅಸಾಂಕ್ರಾಮಿಕ ಖಾಯಿಲೆಗಳ ರೋಗ ತಪಾಸಣೆಯೊಂದಿಗೆ ರಾಜ್ಯದಾದ್ಯಂತ ವಿಸ್ತರಿಸಿ ಆದೇಶ ಹೊರಡಿಸಿದೆ.

ಕೆ.ಎಸ್.ಎಂ.ಎಸ್.ಸಿ.ಎಲ್. ಹಾಗೂ 15ನೇ ಹಣಕಾಸು ಆಯೋಗದ ಅನುದಾನದಿಂದ ರೂ.1,85,74,59,491/- ಗಳನ್ನು ಭರಿಸಿಕೊಂಡು ಈ ಕೆಳಕಂಡಂತೆ ಕ್ರಮಕೈಗೊಳ್ಳಲು ಅನುಮೋದನೆ ನೀಡಲಾಗಿದೆ.

  1. ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ 13 ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಹಾಗೂ ನಿರ್ವಹಣೆಗಾಗಿ ಗೃಹ ಆರೋಗ್ಯ ಯೋಜನೆ ಜಾರಿಗೊಳಿಸುವುದು.
  2. ಅಸಾಂಕ್ರಾಮಿಕ ರೋಗಗಳ ಪರೀಕ್ಷೆಗಾಗಿ ಹಾಗೂ ನಿರ್ವಣೆಗಾಗಿ ಅಗತ್ಯವಿರುವ ತಪಾಸಣಾ ಉಪಕರಣಗಳನ್ನು ಹಾಗೂ ಔಷಧಿಗಳನ್ನು ಈ ಕೆಳಕಂಡಂತೆ ಅನುದಾನದಿಂದ ಭರಿಸಿ ಕೆ.ಟಿ.ಪಿ.ಪಿ ಕಾಯ್ದೆಗಳಡಿ ಖರೀದಿಸಿ ಬಲವರ್ಧನೆಗೊಳಿಸುವುದು.
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read