ರಾಜ್ಯದ ಜನತೆಗೆ ಗುಡ್ ನ್ಯೂಸ್ ‘ಸುವರ್ಣ ರಥ’ ರೈಲು ಪ್ರವಾಸ ಪುನಾರಂಭ

ಬೆಂಗಳೂರು: ಗೋಲ್ಡನ್ ಚಾರಿಯೇಟ್ (ಸುವರ್ಣ ರಥ) ರೈಲು ಪ್ರವಾಸವನ್ನು ಪುನರಾರಂಭಿಸಲಾಗಿದೆ. ಜುವೆಲ್ಸ್‌ ಆಫ್‌ ಸೌತ್‌, ಪ್ರೈಡ್‌ ಆಫ್‌ ಕರ್ನಾಟಕ ಹಾಗೂ ಗ್ಲಿಂಪ್ಸೆಸ್‌ ಆಫ್‌ ಕರ್ನಾಟಕ ಎಂಬ ಮೂರು ವಿಧದ ಯಾತ್ರೆಗಳ ಸೇವೆ ಆರಂಭಗೊಂಡಿದೆ.

ರೈಲಿನ 18 ಕೋಚ್‍ಗಳಲ್ಲಿ ಕರ್ನಾಟಕ ಆಳಿದ ರಾಜವಂಶಸ್ಥರುಗಳಾದ ಕದಂಬ, ಹೊಯ್ಸಳ, ವಿಜಯನಗರ ಚಾಲುಕ್ಯರ ಹೆಸರನ್ನು ಇಡಲಾಗಿದೆ. ಊಟ, ವಸತಿಗೆ ಐಷಾರಾಮಿ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಗೋಲ್ಡನ್ ಚಾರಿಯೇಟ್ ಪ್ರವಾಸೋದ್ಯಮ ವಿಶ್ವದ ಪ್ರಸಿದ್ಧ ಪರಂಪರೆಯ ತಾಣಗಳ ಜೊತೆಗೆ ಪಶ್ಚಿಮ ಘಟ್ಟಗಳು, ಪ್ರಾಚೀನ ಕಡಲತೀರಗಳು, ಸಾಂಸ್ಕೃತಿಕ ತಾಣಗಳಿಗೆ ಪ್ರವಾಸಿಗರನ್ನು ಕರೆದೊಯ್ಯುತ್ತದೆ. ಇದರಿಂದ ರೈಲು ಹೋಟೆಲ್‍ಗಳು, ಕುಶಲಕರ್ಮಿಗಳು, ಪ್ರವಾಸ ನಿರ್ವಾಹಕರಿಗೆ ಆದಾಯ ಕಲ್ಪಿಸಿದಂತಾಗುತ್ತದೆ. ಈ ವಿಶೇಷ ರೈಲು ಪ್ರವಾಸ ಜಾಗತಿಕ ಮಟ್ಟದಲ್ಲಿ ವಿಶ್ವದ ಏಳು ಅತ್ಯುತ್ತಮ ಐಷಾರಾಮಿ ರೈಲು ಪ್ರಯಾಣಗಳಲ್ಲಿ ಗುರುತಿಸಲಾಗಿದ್ದು, ಹಲವಾರು ಪ್ರಶಸ್ತಿ ಪಡೆದುಕೊಂಡಿದೆ.

ಈ ರೈಲು 44 ಸುಸುಜ್ಜಿತ ಕ್ಯಾಬಿನ್‍ಗಳು, ಎನ್ ಸೂಟ್ ಸ್ನಾನಗೃಹ, ವೈಫೈ ಸಹ ಒಳಗೊಂಡಿದೆ. ರುಚಿ ಮತ್ತು ನಳಪಾಕ ಹೆಸರಿನ ಎರಡು ಹೋಟೆಲ್‍ಗಳು ಭಾರತೀಯ ಮತ್ತು ಅಂತರರಾಷ್ಟ್ರೀಯ ಪಾಕಪದ್ದತಿ ಸೇವೆ ನೀಡುತ್ತದೆ. ಲಾಂಜ್ ಬಾರ್, ಫಿಟ್‍ನೆಸ್ ಸೆಂಟರ್ ಇತರೆ ಸೌಕರ್ಯ ಕಲ್ಪಿಸಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read