ಈ ವಿಮಾನ ಪ್ರಯಾಣಿಕ ‘ಚಿನ್ನ’ ಅಡಗಿಸಿಟ್ಟುಕೊಂಡಿದ್ದೆಲ್ಲಿ ಅಂತ ತಿಳಿದ್ರೆ ಶಾಕ್ ಆಗ್ತೀರಾ…!

ಚಿನ್ನದ ಮೇಲೆ ಭಾರತೀಯರಿಗೆ ಬಲು ಪ್ರೀತಿ. ಆಪತ್ಕಾಲದಲ್ಲಿ ನೆರವಾಗುತ್ತದೆ ಎಂಬ ಕಾರಣಕ್ಕೋ ಅಥವಾ ಆಭರಣಗಳಿಂದ ಸೌಂದರ್ಯ ಹೆಚ್ಚುತ್ತದೆ ಎಂಬುದಕ್ಕೋ ಖರೀದಿಸಲು ಬಯಸುತ್ತಾರೆ. ಹೀಗಾಗಿಯೇ ಚಿನ್ನದ ದರ ಸದಾ ಏರುಮುಖವಾಗಿ ಇರುತ್ತದೆ.

ಚಿನ್ನಕ್ಕೆ ಬೇಡಿಕೆ ಇರುವ ಕಾರಣ ಹೊರದೇಶದಿಂದ ಅಕ್ರಮವಾಗಿ ಭಾರತಕ್ಕೆ ತರಲು ಆರೋಪಿಗಳು ತರಹೇವಾರಿ ವಿಧಾನಗಳನ್ನು ಅನುಸರಿಸುತ್ತಿದ್ದು, ಆದರೂ ಕೂಡ ಅಧಿಕಾರಿಗಳು ಇಂಥದ್ದನ್ನು ಪತ್ತೆ ಹಚ್ಚಿ ಚಿನ್ನವನ್ನು ವಶಪಡಿಸಿಕೊಳ್ಳುತ್ತಿದ್ದಾರೆ.

ಈಗ ಇಂಥವುದೇ ಇನ್ನೊಂದು ಪ್ರಕರಣ ಹೈದರಾಬಾದಿನಲ್ಲಿ ಬಯಲಾಗಿದ್ದು, ಮಸ್ಕತ್ ನಿಂದ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನನ್ನು ಪರಿಶೀಲಿಸಿದಾಗ ಆತನ ಗುದನಾಳದಲ್ಲಿ ಬರೋಬ್ಬರಿ 42 ಲಕ್ಷ ರೂಪಾಯಿ ಮೌಲ್ಯದ 685 ಗ್ರಾಂ ಪೇಸ್ಟ್ ರೂಪದ ಚಿನ್ನ ಪತ್ತೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read