ನವದೆಹಲಿ: ಗೋಲ್ಡ್ ಸ್ಮಗ್ಲಿಂಗ್, ತೆರಿಗೆ ವಂಚನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಬೇಕಾಗಿದ್ದ ಆರೋಪಿ ಮೋನಿಕಾ ಕಪೂರ್ ಅವರನ್ನು ಸಿಬಿಐ ಅಧಿಕಾರಿಗಳು ಅಮೆರಿಕಾದಲ್ಲಿ ಬಂಧಿಸಿದ್ದಾರೆ.
ಮೋನಿಕಾ ಕಪೂರ್ ಸಹೋದರರ ಜೊತೆಗೂಡಿ ಬ್ ತೆರಿಗೆ ವಂಚಿಸಿ ಚಿನ್ನ ಕಳ್ಳ ಸಾಗಾಣೆ ಮಾಡಿದ್ದರು. ಕಳೆದ 25 ವರ್ಷಗಳಿಂದ ತಲೆಮರೆಸಿಕೊಂಡಿದ್ದರು. ಮೋನಿಕಾ ವಿರುದ್ಧ ಇಂಟರ್ ಪೋಲ್ ರೆಡ್ ನೋಟಿಸ್ ಹೊರಡಿಸಿತ್ತು. ಇದೀಗ ಅಮೆರಿಕಾ ಪೊಲೀಸರ ಸಹಾಯದಿಂದ ಸಿಬಿಐ ಮೋನಿಕಾ ರನ್ನು ವಶಕ್ಕೆ ಪಡೆದಿದೆ.
ಮೋನಿಕಾರನ್ನು ವಶಕ್ಕೆ ಪಡೆದಿರುವ ಸಿಬಿಐ ಅಧಿಕಾರಿಗಳು ವಿಮಾನದಲ್ಲಿ ಭಾರತಕ್ಕೆ ಕರೆತರುತ್ತಿದ್ದು, ಇಂದು ಮಧ್ಯರಾತ್ರಿ ವೇಳೆಗೆ ಭಾರತ ತಲುಪುವ ಸಾಧ್ಯತೆ ಇದೆ. ಕಳೆದವಾರ ನೆಹಲ್ ಮೋದಿ ಅವರನ್ನು ಬಂಧಿಸಿದ್ದ ಬೆನ್ನಲ್ಲೇ ಇದೀಗ ಮೋನಿಕಾ ಕಪೂರ್ ರನ್ನು ಕೂಡ ಅಮೆರಿಕಾ ಪೊಲೀಸರ ಸಹಾಯದಿಂದ ಬಂಧಿಸಲಾಗಿದೆ.