ಚಿನ್ನ, ಬೆಳ್ಳಿ ಬೆಲೆ ಕೇಳಿ ಬೆಚ್ಚಿಬಿದ್ದ ಗ್ರಾಹಕರು: ಭಾರೀ ಏರಿಕೆಯಾಗಿ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದ ಚಿನ್ನ, ಬೆಳ್ಳಿ ದರ

ನವದೆಹಲಿ: ಅಮೆರಿಕದ ಸುಂಕಗಳ ಮೇಲಿನ ಅನಿಶ್ಚಿತತೆ, ವ್ಯಾಪಾರ ಉದ್ವಿಗ್ನತೆ ಮತ್ತು ಫೆಡರಲ್ ರಿಸರ್ವ್‌ನಿಂದ ಹಣಕಾಸು ನೀತಿ ಸಡಿಲಿಕೆಯ ನಿರೀಕ್ಷೆಗಳ ನಡುವೆ ಜಾಗತಿಕ ಮಾರುಕಟ್ಟೆಗಳಲ್ಲಿನ ಬಲವಾದ ಪ್ರವೃತ್ತಿಗಳನ್ನು ಅನುಸರಿಸಿ ಸೋಮವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೊಸ ದಾಖಲೆಯ ಮಟ್ಟವನ್ನು ತಲುಪಿ, ತಲಾ ರೂ.1,300 ಏರಿಕೆಯಾಗಿವೆ.

ಶೇ. 99.9ರಷ್ಟು ಶುದ್ಧತೆಯ ಚಿನ್ನದ ದರ 10 ಗ್ರಾಂಗೆ ರೂ.1,300 ಏರಿಕೆಯಾಗಿ 90,750 ರೂ. ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ. ಗುರುವಾರ 10 ಗ್ರಾಂಗೆ ರೂ.89,450 ಕ್ಕೆ ಮುಕ್ತಾಯಗೊಂಡಿತ್ತು.

ಶೇಕಡ 99.5 ರಷ್ಟು ಶುದ್ಧತೆಯ ಚಿನ್ನ 1,300 ರೂ. ಏರಿಕೆಯಾಗಿ 10 ಗ್ರಾಂಗೆ 90,350 ರೂ. ಗರಿಷ್ಠ ಮಟ್ಟಕ್ಕೆ ಮಾರಾಟವಾಗಿದೆ.

ಈ ವರ್ಷ ಇಲ್ಲಿಯವರೆಗೆ, ಹಳದಿ ಲೋಹದ ಬೆಲೆಗಳು ಜನವರಿ 1 ರಂದು 10 ಗ್ರಾಂಗೆ 79,390 ರೂ.ಗಳಿಂದ 11,360 ರೂ. ಅಥವಾ ಶೇ. 14.31 ರಷ್ಟು ಏರಿಕೆಯಾಗಿ 90,750 ರೂ.ಗಳಿಗೆ ತಲುಪಿದೆ.

ಬೆಳ್ಳಿ ಬೆಲೆಗಳು ಸಹ 1,300 ರೂ.ಗಳಷ್ಟು ಏರಿಕೆಯಾಗಿ ಪ್ರತಿ ಕೆಜಿಗೆ 1,02,500 ರೂ.ಗಳ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದವು. ಬೆಳ್ಳಿ ದರ ಗುರುವಾರ ಪ್ರತಿ ಕೆಜಿಗೆ 1,01,200 ರೂ.ಗಳಿಗೆ ಮುಕ್ತಾಯಗೊಂಡಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read