ಯುಗಾದಿ ಮುನ್ನಾ ದಿನವೂ ಏರಿಕೆ ಕಂಡ ಚಿನ್ನ, ಬೆಳ್ಳಿ ದರ

ಬೆಂಗಳೂರು: ಯುಗಾದಿ ಮುನ್ನಾ ದಿನವೂ ಚೆನ್ನ ಮತ್ತು ಬೆಳ್ಳಿ ದರ ಏರಿಕೆ ಕಂಡಿದೆ. 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 440 ರೂ. ಏರಿಕೆಯಾಗಿದ್ದು, 71,080 ರೂ.ಗೆ ತಲುಪಿದೆ. ಅದೇ ರೀತಿ ಬೆಳ್ಳಿ ದರ ಕೆಜಿಗೆ 1076 ರೂ. ಹೆಚ್ಚಳವಾಗಿದ್ದು, 82,064 ರೂ.ಗೆ ತಲುಪಿದೆ.

ಇತ್ತೀಚಿನ ದಿನಗಳಲ್ಲಿ ಏರಿಕೆ ಹಾದಿಯಲ್ಲಿರುವ ಚಿನ್ನ ಮತ್ತು ಬೆಳ್ಳಿ ದರ ತೀವ್ರ ಏರಿಕೆ ಕಂಡಿದೆ. ಚಿನ್ನದ ದರ 71,000 ರೂ. ಗಡಿ ದಾಟಿದ್ದು, ಬೆಳ್ಳಿ ದರ 82,000 ರೂ. ಗಡಿ ದಾಟಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ದರ 10 ಗ್ರಾಂ ಗೆ 71,430 ರೂ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 71,280 ರೂ. ಇದೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ 71,280 ರೂ.ಗೆ ಏರಿಕೆಯಾಗಿದೆ. ಜಾಗತಿಕ ಬೆಳವಣಿಗೆ ಆಧರಿಸಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಏರಿಕೆ ಕಂಡಿದೆ. ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನವನ್ನು ಪರಿಗಣಿಸಿರುವುದರಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ದರ ಏರಿಕೆಯಾಗುತ್ತಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read