ಚಿನ್ನಾಭರಣ ಖರೀದಿಸುವವರಿಗೆ ಶಾಕ್: ಸಾರ್ವಕಾಲಿಕ ಗರಿಷ್ಠ ದಾಖಲೆ ಬರೆದ ಚಿನ್ನ, ಬೆಳ್ಳಿ ದರ

ನವದೆಹಲಿ: ಏರುಗತಿಯಲ್ಲಿ ಸಾಗುತ್ತಿರುವ ಚಿನ್ನ ಮತ್ತು ಬೆಳ್ಳಿ ದರ ಸಾರ್ವಕಾಲಿಕ ದಾಖಲೆ ಬರೆದಿದೆ. ಮಧ್ಯ ಪ್ರಾಚ್ಯದ ಸಂಘರ್ಷದ ನಡುವೆ ದೇಶದಲ್ಲಿ ಮಂಗಳವಾರ ಚಿನ್ನ ಮತ್ತು ಬೆಳ್ಳಿ ದರ ಸಾರ್ವಕಾಲಿಕ ಹೆಚ್ಚಳ ಕಂಡಿದೆ.

ಬೆಂಗಳೂರಿನಲ್ಲಿ 99.5 ಶುದ್ಧತೆಯ ಚಿನ್ನ 10 ಗ್ರಾಂಗೆ 75,820 ರೂ.ಗೆ ತಲುಪಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನದ ಸಾರ್ವಕಾಲಿಕ ಗರಿಷ್ಠ ದರ ಇದಾಗಿದೆ. ಪ್ರತಿ ಕೆಜಿ ಬೆಳ್ಳಿ ದರ ಸಾರ್ವಕಾಲಿಕ ಗರಿಷ್ಠ ದರವಾದ 86,200 ರೂಪಾಯಿಗೆ ತಲುಪಿದೆ.

ದೇಶದ ರಾಜಧಾನಿ ದೆಹಲಿಯಲ್ಲಿ ಚಿನ್ನದ ದರ 700 ರೂಪಾಯಿ ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 73,750 ರೂ.ಆಗಿದೆ. ಬೆಳ್ಳಿ ದರ ಕೆಜಿಗೆ 800 ರೂಪಾಯಿ ಏರಿಕೆ ಕಂಡಿದ್ದು 86,500 ರೂಪಾಯಿಗೆ ತಲುಪಿದೆ.

ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 90.5 ಶುದ್ಧ ಚಿನ್ನದ ದರ 10 ಗ್ರಾಂ ಗೆ 73,008 ರೂಪಾಯಿ ಆಗಿದ್ದು, 99.9 ಶುದ್ಧತೆಯ ಚಿನ್ನದ ದರ 73,302 ರೂ.ಗೆ ಏರಿಕೆ ಕಂಡಿದೆ. ಬೆಳ್ಳಿ ದರ 82,213 ರೂಪಾಯಿಗೆ ತಲುಪಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read