HomeLatest Newsಚಿನ್ನಾಭರಣ ಖರೀದಿದಾರರಿಗೆ ಬಿಗ್ ಶಾಕ್: 10 ಗ್ರಾಂಗೆ 1,00,750 ರೂ.ಗೆ ಏರಿಕೆ

ಚಿನ್ನಾಭರಣ ಖರೀದಿದಾರರಿಗೆ ಬಿಗ್ ಶಾಕ್: 10 ಗ್ರಾಂಗೆ 1,00,750 ರೂ.ಗೆ ಏರಿಕೆ

ನವದೆಹಲಿ: ಒಂದು ಲಕ್ಷ ರೂಪಾಯಿ ಗಡಿ ದಾಟಿದ ನಂತರ ಸ್ವಲ್ಪ ಇಳಿಕೆ ಕಂಡಿದ್ದ ಚಿನ್ನದ ಮತ್ತೆ ಒಂದು ಲಕ್ಷ ರೂಪಾಯಿ ಗಡಿ ದಾಟಿ ದಾಖಲೆ ಬರೆದಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 1,00,750 ರೂಪಾಯಿಗೆ ತಲುಪಿದೆ. ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಗಡಿ ಉದ್ವಿಗ್ನತೆ ಸ್ಥಿತಿ ದರ ಹೆಚ್ಚಳಕ್ಕೆ ಕಾರಣವೆಂದು ವಿಶ್ಲೇಷಿಸಲಾಗಿದೆ.

ಶೇ. 99.5 ಪರಿಶುದ್ಧತೆಯ ಚಿನ್ನ ಬುಧವಾರ ಒಂದೇ ದಿನ 1000 ರೂ. ಏರಿಕೆ ಕಂಡಿದ್ದು, 1,00,750 ರೂಪಾಯಿಗೆ ತಲುಪಿದೆ. ಮಂಗಳವಾರ 99,750 ರೂ. ಇತ್ತು. ಆಭರಣ ಚಿನ್ನದ ದರ ಕೂಡ 1050 ರೂಪಾಯಿ ಏರಿಕೆ ಕಂಡಿದ್ದು, 1,00, 350 ರೂಪಾಯಿಗೆ ತಲುಪಿದೆ. ಮಂಗಳವಾರ 99,300 ರೂ. ರೂಪಾಯಿ ಇತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಳ್ಳಿ ದರ ಕೆಜಿಗೆ 440 ಏರಿಕೆಯಾಗಿ 98,940 ರೂ.ಗೆ ತಲುಪಿದೆ. ಹಿಂದಿನ ದಿನ 98,500 ರೂ. ದರ ಇತ್ತು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular