ಆಷಾಢದಲ್ಲೂ ಹೆಚ್ಚಿದ ಬೇಡಿಕೆ: ಚಿನ್ನದ ದರ ಮತ್ತಷ್ಟು ಏರಿಕೆ

ನವದೆಹಲಿ: ಚಿನ್ನದ ದರ 10 ಗ್ರಾಂ ಗೆ 550 ರೂಪಾಯಿ ಏರಿಕೆಯಾಗಿದೆ. ಆಭರಣ ತಯಾರಕರಿಂದ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ದೆಹಲಿಯ ಚಿನಿವಾರಪೇಟೆಯಲ್ಲಿ ಮಂಗಳವಾರದ ಚಿನ್ನದ ದರ 10 ಗ್ರಾಂ ಗೆ 550 ರೂ. ಏರಿಕೆಯಾಗಿ 71,600 ರೂ.ಗೆ ಮಾರಾಟವಾಗಿದೆ.

ಚಿನ್ನದ ದರ ಏರಿಕೆಯಾಗಿದ್ದರೂ, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೆಜಿಗೆ 84,500 ರೂಪಾಯಿಗೆ ಮಾರಾಟವಾಗಿದೆ. ಅಮೆರಿಕದ ಕೇಂದ್ರೀಯ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ಹಣಕಾಸು ನೀತಿ ಸಮಿತಿ ಸಭೆ ನಿರ್ಧಾರ ಬುಧವಾರ ಪ್ರಕಟವಾಗಲಿದ್ದು, ಇದು ಜಾಗತಿಕವಾಗಿ ಚಿನ್ನದ ಬೆಲೆ ಏರಿಳಿತಕ್ಕೆ ಕಾರಣವಾಗಲಿದೆ. ದೇಶಿಯವಾಗಿ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಮಂಗಳವಾರ ಚಿನ್ನದ ದರ 550 ರೂ. ಹೆಚ್ಚಳವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read