
ಮುಂಬೈ: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿ ಸಾಗುತ್ತಿರುವ ಚಿನ್ನದ ಬೆಲೆ 68,000 ರೂ.ಗೆ ತಲುಪಬಹುದು. ಕಳೆದ ಆರ್ಥಿಕ ವರ್ಷದಲ್ಲಿ ಚಿನ್ನದ ದರ ಎರಡಂಕಿ ಬೆಳವಣಿಗೆ ದಾಖಲಿಸಿದೆ. ಮುಂದಿನ ವರ್ಷವೂ ಚಿನ್ನದ ದರ ಶೇಕಡ 15 ರಿಂದ 20ರಷ್ಟು ಏರಿಕೆ ದಾಖಲಿಸಬಹುದು ಎಂದು ತಜ್ಞರು ಅಂದಾಜು ಮಾಡಿದ್ದಾರೆ.
ಪ್ರಸ್ತುತ ಎಂಸಿಎಕ್ಸ್ ಗೋಲ್ಡ್ ಫ್ಯೂಚರ್ಸ್ 10 ಗ್ರಾಂ ಗೆ 59,600 ರೂ.ಗೆ ತಲುಪಿದೆ. ಹೆಚ್ಚಿನ ಹೂಡಿಕೆದಾರರು ಚಿನ್ನದತ್ತ ಮುಖ ಮಾಡಿರುವುದರಿಂದ ಕಳೆದ ಹಣಕಾಸು ವರ್ಷದಲ್ಲಿ ಚಿನ್ನದ ಬೆಲೆ ದೇಶಿಯ ಮಾರುಕಟ್ಟೆಗಳಲ್ಲಿ 52 ಸಾವಿರ ರೂಪಾಯಿಯಿಂದ 60,000 ರೂ. ವರೆಗೂ ದಾಖಲಾಗಿದೆ. ಮುಂದಿನ ಹಣಕಾಸು ವರ್ಷದಲ್ಲಿ ಚಿನ್ನದ ದರ 68,000 ತಲುಪಬಹುದು ಎಂದು ಅಂದಾಜು ಮಾಡಲಾಗಿದೆ.
ಷೇರು ಸೂಚ್ಯಂಕ ನಕಾರಾತ್ಮಕ ಬೆಳವಣಿಗೆ, ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿ ದರ ಹೆಚ್ಚಳ, ರಷ್ಯಾ -ಉಕ್ರೇನ್ ಯುದ್ಧ, ಜಾಗತಿಕ ಹಣದುಬ್ಬರ, ಆರ್ಥಿಕ ಕುಸಿತ ಭೀತಿ ಇವೆ ಮೊದಲಾದ ಕಾರಣಗಳಿಂದ ಚಿನ್ನದ ದರ ಏರುಗತಿಯಲ್ಲಿದೆ ಎಂದು ಹೇಳಲಾಗಿದೆ,

 
		 
		 
		 
		 Loading ...
 Loading ... 
		 
		 
		