ಕರಗ ವೀಕ್ಷಣೆಗೆ ಬಂದ ಮಹಿಳೆಯ ಚಿನ್ನಾಭರಣ ಕಳವು

ಬೆಂಗಳೂರು: ವಿಶ್ವವಿಖ್ಯಾತ ಕರಗ ಮಹೋತ್ಸವ ಮೆರವಣಿಗೆ ವೀಕ್ಷಿಸಲು ಬಂದಿದ್ದ ಮಹಿಳೆಯೊಬ್ಬರ ಚಿನ್ನಾಭರಣಗಳನ್ನು ಕಿಡಿಗೇಡಿಗಳು ಕಳವು ಮಾಡಿದ ಘಟನೆ ತಿಗಳರ ಪೇಟೆಯ ಧರ್ಮರಾಯ ಸ್ವಾಮಿ ದೇವಾಲಯ ಆವರಣದಲ್ಲಿ ನಡೆದಿದೆ.

ಚಿಕ್ಕಪೇಟೆ ನಿವಾಸಿ ರಾಜೇಂದ್ರ ಅವರ ಪತ್ನಿಯ 4.2 ಲಕ್ಷ ರೂಪಾಯಿ ಮೌಲ್ಯದ ಎರಡು ಚಿನ್ನದ ಸರ ಕಳವು ಮಾಡಲಾಗಿದ್ದು, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏಪ್ರಿಲ್ 23ರಂದು ರಾತ್ರಿ ಕರಗ ಮಹೋತ್ಸವದ ಮೆರವಣಿಗೆ ನೋಡಲು ರಾಜೇಂದ್ರ ದಂಪತಿ ಧರ್ಮರಾಯ ದೇವಾಲಯಕ್ಕೆ ಆಗಮಿಸಿದ್ದರು. ಭಕ್ತರು ಹೆಚ್ಚಾಗಿದ್ದ ಕಾರಣ ನೂಕು ನುಗ್ಗಲಿನಲ್ಲಿ ರಾಜೇಂದ್ರ ಅವರ ಪತ್ನಿ ಧರಿಸಿದ್ದ ಆವರಣಗಳನ್ನು ಕಿಡಿಗೇಡಿಗಳು ಎಗರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read