ನವದೆಹಲಿ: ಏರಿಕೆ ಹಾದಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ದರ ಮಂಗಳವಾರ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿದೆ. ದೆಹಲಿ ಚಿನಿವಾರಪೇಟೆಯಲ್ಲಿ ಶುದ್ಧ ಚಿನ್ನ 10 ಗ್ರಾಂ ಗೆ 3900 ರೂ. ಕಡಿಮೆಯಾಗಿದ್ದು, 1,25,800 ರೂಪಾಯಿಗೆ ಮಾರಾಟವಾಗಿದೆ.
ಆಭರಣ ಚಿನ್ನದ ದರ ಕೂಡ 3900 ರೂಪಾಯಿ ಕಡಿಮೆಯಾಗಿದ್ದು, 1,25,200 ರೂಪಾಯಿಗೆ ಮಾರಾಟವಾಗಿದೆ. ಬೆಳ್ಳಿ ದರ ಕೆಜಿಗೆ 7800 ರೂಪಾಯಿ ಕಡಿಮೆಯಾಗಿದ್ದು, 1,56,00 ರೂ.ಗೆ ಇಳಿದಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಕಡಿಮೆಯಾಗಿರುವುದರ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿಯೂ ದರ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಅಪರಂಜಿ ಚಿನ್ನ 10 ಗ್ರಾಂಗೆ 17,400 ಇಳಿಕೆಯಾಗಿದ್ದು, 1,23,660 ರೂ. ಆಗಿದೆ. ಆಭರಣ ಚಿನ್ನದ 1600 ರೂ. ಇಳಿಕೆಯಾಗಿದ್ದು, 1,13,350 ರೂ.ವರೆಗೆ ಮಾರಾಟವಾಗಿದೆ. ಬೆಳ್ಳಿ ದರ ಕೆಜಿಗೆ 5000 ರೂ. ಕಡಿಮೆಯಾಗಿದ್ದು, 1,62,000 ರೂ. ಗೆ ಇಳಿದಿದೆ.
