ಅಂತೂ ಹೊರಬಂತು ಗೋಕರ್ಣ ಮಹಾಬಲೇಶ್ವರ ದೇವಾಲಯದಲ್ಲಿದ್ದ ನಾಗರಹಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಅನೇಕ ದಿನಗಳಿಂದ ಗರ್ಭಗುಡಿ ಬಾಗಿಲಿನ ಮೇಲೆ ಇದ್ದ ನಾಗರಹಾವು ತಾನಾಗಿಯೇ ಹೊರಗೆ ಹೋಗಿದ್ದು, ಭಕ್ತರಲ್ಲಿದ್ದ ಆತಂಕ ದೂರವಾಗಿದೆ.

ಐದು ದಿನಗಳ ಹಿಂದೆ ಸಂಜೆ ಭಕ್ತರನ್ನು ದೇವರ ದರ್ಶನಕ್ಕೆ ಬಿಡುವ ವೇಳೆ ನಾಗರಹಾವು ಕಾಣಿಸಿಕೊಂಡಿತ್ತು. ಅದನ್ನು ಹೊರ ತೆಗೆಯಲು ಸ್ನೇಕ್ ಬಾಬಣ್ಣ, ಅಶೋಕ ನಾಯ್ಕ್ ತದಡಿ ನಿರಂತರ ಪ್ರಯತ್ನ ನಡೆಸಿದ್ದರಾದರೂ ಗರ್ಭಗುಡಿ ಬಾಗಿಲಿನ ಮೇಲಿರುವ ಚಿಕ್ಕ ಸಂದಿಯಲ್ಲಿ ಸೇರಿಕೊಂಡ ಕಾರಣ ಅದನ್ನು ಹೊರತರಲಾಗಲಿಲ್ಲ.

ಗದ್ದಲ ಇದ್ದರೆ ಹಾವು ಹೊರಬರುವುದಿಲ್ಲ. ಯಾರಿಗೂ ತೊಂದರೆ ನೀಡುವುದಿಲ್ಲ ಎಂದು ಉರಗ ತಜ್ಞರು ಭರವಸೆ ನೀಡಿದ್ದರಿಂದ ಪ್ರತಿ ದಿನ ಭಕ್ತರು ದೇಗುಲದಲ್ಲಿ ದರ್ಶನ ಪಡೆದು ಬರುತ್ತಿದ್ದರು. ಹಾವು ಅಲ್ಲೇ ಇದ್ದರೂ ಯಾವುದೇ ತೊಂದರೆ ನೀಡಿರಲಿಲ್ಲ. ದೇವಾಲಯ ಸಿಬ್ಬಂದಿಯು ಈ ಬಗ್ಗೆ ನಿಗಾ ವಹಿಸಿದ್ದರು.

ಶನಿವಾರ ಬೆಳಗಿನ ಜಾವ ಹಾವು ತಾನಾಗಿಯೇ ಹೊರಗೆ ಹೋಗಿದೆ. ದೇಗುಲದಲ್ಲಿನ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಭಕ್ತರಲ್ಲಿದ್ದ ಆತಂಕ ದೂರವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read