‘ದಿ ಶೋ ಮ್ಯಾನ್’ ರಾಜ್ ಕಪೂರ್ ಐತಿಹಾಸಿಕ ಬಂಗಲೆ ಗೋದ್ರೆಜ್ ಪ್ರಾಪರ್ಟೀಸ್ ಪಾಲು

ಬಾಲಿವುಡ್ ಚಿತ್ರರಂಗದ ‘ಶೋ ಮ್ಯಾನ್’ ಎಂದೇ ಖ್ಯಾತರಾಗಿದ್ದ ದಿವಂಗತ ರಾಜ್ ಕಪೂರ್ ಅವರ ಮುಂಬೈನ ಚೆಂಬೂರಿನಲ್ಲಿರುವ ಬಂಗಲೆಯನ್ನು ಗೋದ್ರೆಜ್ ಪ್ರಾಪರ್ಟೀಸ್ ತನ್ನದಾಗಿಸಿಕೊಂಡಿದೆ. ಈ ಜಾಗದಲ್ಲಿ ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಸಂಸ್ಥೆ ನಿರ್ಧರಿಸಿದೆ.

2019 ರಲ್ಲಿ ಚೆಂಬೂರಿನಲ್ಲಿದ್ದ ಆರ್ ಕೆ ಸ್ಟುಡಿಯೋಸ್ ಸಹ ಗೋದ್ರೆಜ್ ಪ್ರಾಪರ್ಟೀಸ್ ತನ್ನದಾಗಿಸಿಕೊಂಡಿದ್ದು, ಈ ಜಾಗದಲ್ಲಿ ಅಪಾರ್ಟ್ಮೆಂಟ್ ಹಾಗೂ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುತ್ತಿದೆ. ಈ ವರ್ಷಾಂತ್ಯಕ್ಕೆ ಅದು ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಇದೀಗ ರಾಜ ಕಪೂರ್ ಬಂಗಲೆ ಸಹ ಗೋದ್ರೆಜ್ ಪ್ರಾಪರ್ಟೀಸ್ ಪಾಲಾಗಿದ್ದು, ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಾಜ್ ಕಪೂರ್ ಅವರ ಪುತ್ರ ರಣಧೀರ್ ಕಪೂರ್, ಸ್ಥಳದ ಅಭಿವೃದ್ಧಿಗಾಗಿ ಗೋದ್ರೆಜ್ ಜೊತೆ ಮತ್ತೊಮ್ಮೆ ಕೈಜೋಡಿಸಲು ಸಂತಸವಾಗುತ್ತಿದೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read