ಆಸ್ಟ್ರೇಲಿಯಾದ ಆಲ್ ರೌಂಡರ್ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್ ಗೆ ಈಗ ಸಂಭ್ರಮವೋ ಸಂಭ್ರಮ. ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ಪತ್ನಿ ವಿನಿ ರಾಮನ್ ದಂಪತಿಗೆ ಗಂಡು ಮಗು ಜನಿಸಿದೆ.
ಮ್ಯಾಕ್ಸ್ವೆಲ್ ಮತ್ತು ಅವರ ಪತ್ನಿ ತಮ್ಮ ನವಜಾತ ಶಿಶುವಿಗೆ ‘ಲೋಗನ್ ಮೇವರಿಕ್ ಮ್ಯಾಕ್ಸ್ವೆಲ್’ ಎಂದು ಹೆಸರಿಟ್ಟಿದ್ದಾರೆ. ಅಭಿಮಾನಿಗಳು ಮತ್ತು ಹಿತೈಷಿಗಳಿಗಾಗಿ ದಂಪತಿಗಳು ಮಗುವಿನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಐಪಿಎಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ, ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮ, ಎಬಿಡಿ ವಿಲಿಯರ್ಸ್ ಸೇರಿ ಹಲವರು ಮ್ಯಾಕ್ಸ್ವೆಲ್ಗೆ ಶುಭಾಶಯ ತಿಳಿಸಿದ್ದಾರೆ. ಮ್ಯಾಕ್ಸ್ವೆಲ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಮಗುವಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಶೀರ್ಷಿಕೆಯಲ್ಲಿ “ಲೋಗನ್ ಮೇವರಿಕ್ ಮ್ಯಾಕ್ಸ್ವೆಲ್” ಎಂದು ಬರೆದಿದ್ದಾರೆ.ಜುಲೈ ತಿಂಗಳಿನಲ್ಲಿ ವಿನಿ ರಾಮನ್ ಅವರಿಗೆ ಹಿಂದೂ ಸಂಪ್ರದಾಯದ ಪ್ರಕಾರ ಸೀಮಂತ ಕೂಡ ಮಾಡಲಾಗಿತ್ತು.
https://twitter.com/CricCrazyJohns/status/1702585064348107260?ref_src=twsrc%5Etfw%7Ctwcamp%5Etweetembed%7Ctwterm%5E1702585064348107260%7Ctwgr%5E25a441d70b0ceb440a50509e58dd2ca948d0dcb7%7Ctwcon%5Es1_&ref_url=https%3A%2F%2Ftv9kannada.com%2Fsports%2Fcricket-news%2Faustralian-cricketer-maxwell-wife-vini-raman-blessed-with-baby-boy-psr-671259.html