ಐಪಿಎಲ್ ಪಂದ್ಯದ ವೇಳೆಯೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಮ್ಯಾಕ್ಸ್ ವೆಲ್ ದಂಪತಿ

ಐಪಿಎಲ್ ಪಂದ್ಯದ ವೇಳೆ ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಅವರ ಪತ್ನಿ ವಿನಿ ರಾಮನ್ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ದಂಪತಿ ಪೋಷಕರಾಗುತ್ತಿದ್ದು ಈ ವರ್ಷದ ಸೆಪ್ಟೆಂಬರ್ ನಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ.

ಮ್ಯಾಕ್ಸ್ ವೆಲ್ ಮತ್ತು ವಿನಿ ರಾಮನ್ ಮಾರ್ಚ್ 2022 ರಲ್ಲಿ ವಿವಾಹವಾದರು. ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದಾಗ ವಿನಿ ರಾಮನ್, ಮ್ಯಾಕ್ಸ್ ವೆಲ್ ನ ಜೊತೆಗೂಡಿದರು.

ಮಗುವನ್ನು ಸ್ವಾಗತಿಸಲು ಉತ್ಸುಕರಾಗಿರುವ ವಿನಿ ರಾಮನ್ “ಗ್ಲೆನ್ ಮತ್ತು ನಾನು ನಮ್ಮ ರೇನ್ಬೋ ಬೇಬಿ ಸೆಪ್ಟೆಂಬರ್ 2023 ಕ್ಕೆ ಬರಲಿದೆ ಎಂದು ಘೋಷಿಸಲು ಭಾವಪರವಶರಾಗಿದ್ದೇವೆ. ಈ ಪ್ರಯಾಣವು ಸುಗಮ ಅಥವಾ ಸುಲಭವಲ್ಲ ಎಂದು ಒಪ್ಪಿಕೊಳ್ಳುವುದು ನಮಗೆ ತುಂಬಾ ಮುಖ್ಯವಾಗಿದೆ ಎಂದು ಇನ್ ಸ್ಟಾಗ್ರಾಂ ನಲ್ಲಿ ಬರೆದಿದ್ದಾರೆ.

ಈ ಪೋಸ್ಟ್ ಬಾಲಿವುಡ್ ನಟಿ ಮತ್ತು ಮ್ಯಾಕ್ಸ್ ವೆಲ್‌ನ RCB ತಂಡದ ಸಹ ಆಟಗಾರ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಸೇರಿದಂತೆ ಇನ್ ಸ್ಟಾ ಬಳಕೆದಾರರಿಂದ ಬಹಳಷ್ಟು ಪ್ರೀತಿಯನ್ನು ಸೆಳೆದಿದೆ. ವಿನಿ ಪೋಸ್ಟ್ ಗೆ ಅನುಷ್ಕಾ ಹೃದಯದ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.

Glenn Maxwell And Vini Raman To Become Parents, She Announces Her Due Date With A Sonography

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read