ರಕ್ಷಾಬಂಧನದ ದಿನ ಸಹೋದರಿಯನ್ನು ಖುಷಿಪಡಿಸಲು ನೀಡಿ ಈ ಸ್ಪೆಷಲ್ ಗಿಫ್ಟ್

ಅಣ್ಣ-ತಂಗಿಯ ಪ್ರೀತಿ ಬಾಂಧವ್ಯದ ಪ್ರತೀಕವಾದ  ರಕ್ಷಾಬಂಧನವನ್ನು ಪ್ರತಿ ವರ್ಷದ ಶ್ರಾವಣ ಮಾಸದ ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ. ಇದು ಈ ವರ್ಷ ಆಗಸ್ಟ್ 31 ರಂದು ಆಚರಿಸಲಾಗ್ತಿದೆ.

ಸಹೋದರ-ಸಹೋದರಿ ಬಾಂಧವ್ಯವನ್ನು ಗಟ್ಟಿಗೊಳಿಸುವಂತಹ ದಿನ ಇದು. ರಕ್ಷಾಬಂಧನ ಎಂದರೆ  ರಕ್ಷಣೆಯ ಗಂಟು ಎಂದರ್ಥ.

ಈ ದಿನ ಸಹೋದರಿ ತನ್ನ ಸಹೋದರನ ಮಣಿಕಟ್ಟಿಗೆ ರಾಖಿಯನ್ನು ಕಟ್ಟುತ್ತಾಳೆ. ಸಹೋದರನು ಪ್ರೀತಿ, ಬಾಂಧವ್ಯದ ಪ್ರತೀಕವಾಗಿ ಉಡುಗೊರೆಯಾಗಿ ಕೊಟ್ಟು ಅವಳನ್ನು ರಕ್ಷಿಸುವ ಭರವಸೆ ನೀಡುತ್ತಾನೆ.

ಸಾಮಾನ್ಯವಾಗಿ ಸಹೋದರ ರಕ್ಷಾ ಬಂಧನದ ದಿನ ತನ್ನ ಸಹೋದರಿಗೆ ಏನು ಉಡುಗೊರೆಯನ್ನು ಕೊಟ್ಟರೆ ಖುಷಿಯಾಗಬಹುದೆಂದು  ಯೋಚಿಸುತ್ತಾನೆ. ನೀವು ಅಂತಹ ಯೋಚನೆ ಹೊಂದಿದ್ದರೆ, ಈ ಉಡುಗೊರೆಗಳನ್ನು ನಿಮ್ಮ ಸಹೋದರಿಗೆ ನೀಡಿ  ಸಂತೋಷಪಡಿಸಿ.

ಚಾಕೊಲೇಟ್ ಮತ್ತು ಸಿಹಿತಿಂಡಿಗಳು: ಪ್ರತಿ ಹುಡುಗಿ ಚಾಕೊಲೇಟುಗಳು ಮತ್ತು ಸಿಹಿ ತಿನ್ನಲು ಬಯಸುತ್ತಾಳೆ. ಈ ರೀತಿಯಾಗಿ, ಅಚ್ಚುಮೆಚ್ಚಿನ ಚಾಕೊಲೇಟ್, ಸ್ವೀಟ್ ನೀಡಿ. ಅಥವಾ ಅವಳಿಗಿಷ್ಟವಾದ ತಿನಿಸನ್ನು ನೀವೇ ಮಾಡಿ ತಿನ್ನಿಸಿ. ಖಂಡಿತ ಇದು ಅವರಿಗೆ ಇಷ್ಟವಾಗುತ್ತದೆ. ಮುಖದ ಮೇಲೆ ಮುದ್ದಾದ ಮಂದಹಾಸ ಮೂಡಿಸುತ್ತದೆ.

ಹಳೆಯ ಫೋಟೋಗಳು: ನಿಮ್ಮ ಸಹೋದರಿಯನ್ನು ಮೆಚ್ಚಿಸಲು ನಿಮ್ಮ ಹಳೆಯ ನೆನಪುಗಳ ಫೋಟೋವನ್ನು ಒಂದುಗೂಡಿಸಿ  ರಕ್ಷಾ ಬಂಧನದ ಉಡುಗೊರೆಯಾಗಿ ನೀಡಬಹುದು.

ಕೈಗಡಿಯಾರ: ನಿಮ್ಮ ಸಹೋದರಿಯನ್ನು ಮೆಚ್ಚಿಸಲು ಅವರಿಗೆ ಸೊಗಸಾದ ಮತ್ತು ಹೊಸ ಶೈಲಿಯ ಕೈಗಡಿಯಾರವನ್ನು ಸಹ ನೀವು ನೀಡಬಹುದು.

ಸಂಗೀತ ವಸ್ತುಗಳು: ನಿಮ್ಮ ಸಹೋದರಿ ಸಂಗೀತದಲ್ಲಿ ಆಸಕ್ತಿ ಹೊಂದಿದ್ದರೆ, ನೀವು ನಿಮ್ಮ ಸಹೋದರಿಗೆ ಉಡುಗೊರೆ ರೂಪದಲ್ಲಿ ಸಂಗೀತದ ವಸ್ತುಗಳನ್ನು ನೀಡಬಹುದು. ನಿಮ್ಮ ಸಹೋದರಿಗಾಗಿ ನೀವು ಖರೀದಿಸಬಹುದಾದ ವಿಭಿನ್ನ ಸಂಗೀತ ವಸ್ತುಗಳು ಮಾರುಕಟ್ಟೆಯಲ್ಲಿ  ಲಭ್ಯವಿದೆ.

ಸುಂದರ ಉಡುಪುಗಳು: ನಿಮ್ಮ ಸಹೋದರಿಯನ್ನು ಸಂತೋಷಪಡಿಸಲು, ನೀವು ಅವರಿಗೆ ಬ್ರಾಂಡೆಡ್ ಹಾಗೂ ಉತ್ಕೃಷ್ಠ ಬಟ್ಟೆಗಳನ್ನು ಖರೀದಿಸಿ ಉಡುಗೊರೆ ನೀಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read