ಸಂಬಂಧಕ್ಕೂ ಮೊದಲು ನೀಡಿ ಭಾವನೆಗಳಿಗೆ ಮಹತ್ವ

ಪ್ರತಿಯೊಂದು ಸಂಬಂಧದಲ್ಲಿಯೂ ಕೋಪ-ಪ್ರೀತಿ ಇದ್ದಿದ್ದೆ. ದಂಪತಿ ಖಾಸಗಿ ಜೀವನಕ್ಕೆ ಸಂಬಂಧಿಸಿದಂತೆ ಸಮಸ್ಯೆ ಎದುರಿಸುತ್ತಾರೆ. ಅನೇಕರು ಬೆಡ್ ರೂಂ ವಿಷಯವನ್ನು ಹೇಳಿಕೊಳ್ಳುವುದಿಲ್ಲ. ತಮ್ಮ ಸಂಗಾತಿ ಬಳಿಯೂ ಶಾರೀರಿಕ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡುವುದಿಲ್ಲ. ಇದ್ರಿಂದ ಕೆಲ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಸಂಬಂಧ ಹಳಸಲು ಕಾರಣವಾಗುತ್ತದೆ.

ಶಾರೀರಿಕ ಸಂಬಂಧ ದಾಂಪತ್ಯದ ಒಂದು ಭಾಗ. ಹಾಗಂತ ಸಂತೋಷವಿಲ್ಲದೆ ಯಂತ್ರವಾಗುವುದು ಒಳ್ಳೆಯದಲ್ಲ. ಅನೇಕರು ಸಂಬಂಧ ಬೆಳೆಸುವ ವೇಳೆ ಒತ್ತಡಕ್ಕೊಳಗಾಗ್ತಾರೆ. ಇದನ್ನು ಮುಚ್ಚಿಟ್ಟುಕೊಳ್ಳುವ ಬದಲು ನಿಮ್ಮ ಸಂಗಾತಿಗೆ ಹೇಳುವುದು ಉತ್ತಮ. ಇದ್ರಿಂದ ಪ್ರೀತಿ ಹೆಚ್ಚಾಗುತ್ತದೆ.

ಮದುವೆ ನಂತ್ರ ಕೆಲವರು ಅವಿಭಕ್ತ ಕುಟುಂಬದಲ್ಲಿರುತ್ತಾರೆ. ಅಲ್ಲಿ ದಂಪತಿ ಬಿಂದಾಸ್ ಆಗಿರಲು ಸಾಧ್ಯವಿಲ್ಲ. ಹಾಗಂತ ಸಿಕ್ಕ ಅವಕಾಶಗಳನ್ನು ಬಿಡಬೇಡಿ. ಅವಕಾಶ ಸಿಕ್ಕಾಗ ಸಂಗಾತಿ ಜೊತೆ ಸಣ್ಣ ಪುಟ್ಟ ತುಂಟಾಟವಾಡಿ.

ಸಾಮಾನ್ಯವಾಗಿ ಸಂಗಾತಿ ಮುಂದೆ ಶಾರೀರಿಕ ಸಂಬಂಧದ ಬಗ್ಗೆ ಮಾತನಾಡುವುದಿಲ್ಲ. ಹಾಗೆ ಯಾವುದು ಇಷ್ಟ, ಯಾವುದು ಕಷ್ಟ ಎಂಬೆಲ್ಲ ವಿಷಯದ ಬಗ್ಗೆ ಚರ್ಚೆ ಮಾಡುವುದಿಲ್ಲ. ಸಂಗಾತಿ ಬಗ್ಗೆ ಎಲ್ಲ ವಿಷಯ ತಿಳಿದುಕೊಂಡಿದ್ದರೆ ಸಂಬಂಧ ಮತ್ತಷ್ಟು ಗಟ್ಟಿಯಾಗಲು ಸಾಧ್ಯ.

ಇಡೀ ದಿನ ಕಚೇರಿಯಲ್ಲಿ ಕೆಲಸ ಮಾಡಿ ಸುಸ್ತಾಗಿರುತ್ತದೆ. ಮನೆಗೆ ಬಂದು ನಿದ್ರೆ ಮಾಡಿದ್ರೆ ಸಾಕು ಎಂಬಂತಾಗಿರುತ್ತದೆ. ಮನಸ್ಸು ಸಂಗಾತಿ ಜೊತೆ ಸ್ವಲ್ಪ ಸಮಯ ಕಳೆಯಲು ಬಯಸುತ್ತದೆ. ದೇಹ ಒಲ್ಲೆ ಎನ್ನುತ್ತಿರುತ್ತದೆ. ಈ ವೇಳೆ ಸಂಗಾತಿಗೆ ಒಂದು ಹಗ್ ಮಾಡಿ ಕೆಲ ಹೊತ್ತು ಪ್ರೀತಿಯ ಮಾತುಗಳನ್ನಾಡಿ.

ಸಂಗಾತಿ ನಿಮ್ಮ ಜೊತೆ ಇರುವ ವೇಳೆ ಸಾಧ್ಯವಾದಷ್ಟು ಹೊತ್ತು ಅವರ ಜೊತೆಯೇ ಸಮಯ ಕಳೆಯಿರಿ. ಅವರು ಮುಂದಿರುವಾಗ ಫೋನ್, ಸಾಮಾಜಿಕ ಜಾಲತಾಣದಲ್ಲಿ ನಿರತರಾಗಿರುವುದು ಬೇಡ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read