ಹುಡುಗರ ಇಂಥ ವ್ಯಕ್ತಿತ್ವಕ್ಕೆ ಮನ ಸೋಲ್ತಾರೆ ಹುಡುಗಿಯರು

ನೋಡಿದ ತಕ್ಷಣ ಸೆಳೆಯೋದು ವ್ಯಕ್ತಿಯ ಸೌಂದರ್ಯ ನಿಜ. ಆದ್ರೆ ಸಂಬಂಧ ನೂರು ಕಾಲ ಗಟ್ಟಿಯಾಗಿರಲು ಬೇಕಾಗಿರೋದು ಸೌಂದರ್ಯವಲ್ಲ, ವ್ಯಕ್ತಿತ್ವ. ಹುಡುಗಿ ಕೂಡ ಒಬ್ಬ ಹುಡುಗನ ಸೌಂದರ್ಯಕ್ಕಿಂತ ಆತನ ವ್ಯಕ್ತಿತ್ವದ ಜೊತೆ ಬಾಡಿ ಲಾಂಗ್ವೇಜ್ ಗೆ ಹೆಚ್ಚು ಆಕರ್ಷಿತಳಾಗ್ತಾಳೆ

ಮಹಿಳೆ ಜೊತೆ ಮಾತನಾಡುವಾಗ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡಬೇಕು. ಆಕೆ ಮಾತು ಮುಗಿಯುವವರೆಗೂ ಆಕೆಯನ್ನು ನೋಡ್ತಿರಬೇಕು. ಮಾತನಾಡುವ ವೇಳೆ ಅಲ್ಲಿ ಇಲ್ಲಿ ನೋಡಿದ್ರೆ ನಿಮಗೆ ಮಾತನಾಡಲು ಆಸಕ್ತಿಯಿಲ್ಲ ಎಂದು ಮಹಿಳೆ ಭಾವಿಸ್ತಾಳೆ. ನಿಮ್ಮ ಮೇಲಿನ ಆಸಕ್ತಿ ಕಡಿಮೆಯಾಗುತ್ತದೆ.

ಮೊದಲೇ ಹೇಳಿದಂತೆ ಬಾಡಿ ಲಾಂಗ್ವೆಜ್ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಬಾಡಿ ಲಾಂಗ್ವೇಜ್ ಮಾತಿಗಿಂತ ದುಪ್ಪಟ್ಟು ಭಾವನೆಗಳನ್ನು ಹೊರಗೆ ಹಾಕುತ್ತದೆ. ಮಾತನಾಡುವ ವೇಳೆ ಬಾಡಿ ಲಾಂಗ್ವೇಜ್ ಕಂಫರ್ಟೆಬಲ್ ಆಗಿರುವ ಹುಡುಗನನ್ನು ಹೆಚ್ಚು ಇಷ್ಟಪಡ್ತಾರೆ ಹುಡುಗಿಯರು.

ಹುಡುಗಿ ಜೊತೆ ಮಾತನಾಡುವ ವೇಳೆ ಎಂದೂ ತಲೆತಗ್ಗಿಸಬಾರದು. ತಲೆ ತಗ್ಗಿಸಿ, ನಾಚಿಕೊಳ್ಳುವ ಹುಡುಗ, ಹುಡುಗಿಗೆ ಎಂದೂ ಇಷ್ಟವಾಗುವುದಿಲ್ಲ. ಹಾಗಾಗಿ ತಲೆ ಎತ್ತಿ ಮಾತನಾಡಬೇಕು.

ಐಬ್ರೋ ಬಗ್ಗೆ ಗಮನವಿರಲಿ. ಸಾಮಾನ್ಯವಾಗಿ ಹುಡುಗಿಯರು ಹುಡುಗ್ರ ಐಬ್ರೋವನ್ನು ಗಮನಿಸ್ತಾರೆ. ಮಾತನಾಡುವ ವೇಳೆ ನಿಮ್ಮ ಐಬ್ರೋದಿಂದ ಹುಡುಗಿಯರಿಗೆ ತಪ್ಪು ಸಂದೇಶ ಹೋಗುವ ಸಾಧ್ಯತೆಯಿರುತ್ತದೆ

ಸಂಗಾತಿಯನ್ನು ಸೆಳೆಯಲು ಹುಡುಗ್ರು ಒತ್ತಾಯಪೂರ್ವಕವಾಗಿ ನಗ್ತಾರೆ. ಇದು ಫಲ ನೀಡುವುದಿಲ್ಲ ಎಂಬುದು ನೆನಪಿರಲಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read