ಹುಡುಗಿಯರಿಗೆ ತಿಳಿದಿರಲ್ಲ ಹುಡುಗ್ರ ಈ ವಿಷ್ಯ

ಜನರು ತಮ್ಮನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಪರಸ್ಪರ ದೂರುತ್ತಾರೆ. ಮಹಿಳೆ ಮತ್ತು ಪುರುಷರಲ್ಲಿ ಇದು ಸಾಮಾನ್ಯ. ಇಬ್ಬರ ಮಧ್ಯೆ ಇರುವ ತಪ್ಪು ಗ್ರಹಿಕೆ ಇದಕ್ಕೆ ಕಾರಣ. ಇಬ್ಬರು ಅರ್ಥ ಮಾಡಿಕೊಂಡಾಗ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ಹುಡುಗರು ಹೊಗಳಿಕೆ ಇಷ್ಟಪಡುತ್ತಾರೆ: ಹುಡುಗರು ಸಹ ಹೊಗಳಿಕೆ ಇಷ್ಟಪಡ್ತಾರೆ. ಮಹಿಳೆಯರಿಗೆ ಈ ವಿಷಯದ ಬಗ್ಗೆ ಗೊತ್ತಿರುವುದಿಲ್ಲ. ಅನೇಕ ಹುಡುಗಿಯರು ಸಂಗಾತಿಯನ್ನು ಹೊಗಳುವ ಪ್ರಯತ್ನ ಮಾಡುವುದಿಲ್ಲ.

ಪುರುಷರು ಸಮಯವನ್ನು ಬಯಸುತ್ತಾರೆ: ಪ್ರತಿಯೊಬ್ಬರಿಗೂ ಪ್ರತಿ ದಿನ ಒಂದಿಷ್ಟು ಸಮಯ ಅವರಿಗೆ ಬೇಕು. ಆದ್ರೆ ಒಂಟಿಯಾಗಿ ಸಮಯ ಕಳೆಯುವ ಮಹತ್ವ ಮಹಿಳೆಯರಿಗೆ ತಿಳಿದಿಲ್ಲ. ಪುರುಷರ ಜೊತೆ ಸದಾ ಇರಲು ಬಯಸುವ ಮಹಿಳೆಯರು ಪುರುಷರನ್ನು ಒಬ್ಬಂಟಿಯಾಗಿ ಬಿಡುವುದಿಲ್ಲ.

ಹುಡುಗರು ತಮಾಷೆ ಮಾಡುವ ಅಭ್ಯಾಸ ಹೊಂದಿರುತ್ತಾರೆ: ಹುಡುಗರು ಹುಡುಗಿಯರ ಜೊತೆ ತಮಾಷೆ ಮಾಡ್ತಾರೆ. ಈ ತಮಾಷೆಯನ್ನು ಕೆಲ ಹುಡುಗಿಯರು ತಪ್ಪಾಗಿ ತಿಳಿದುಕೊಳ್ತಾರೆ. ಇದು ಪ್ರೀತಿ ವ್ಯಕ್ತಪಡಿಸುವ ರೀತಿ ಎಂಬುದು ಅವರಿಗೆ ಗೊತ್ತಾಗುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read