ʼಬಾಯ್​ಫ್ರೆಂಡ್​ʼ ಕರೆದುಕೊಂಡು ಬಂದರೆ ಮಾತ್ರ ಕಾಲೇಜಿಗೆ ಪ್ರವೇಶ: ಹೀಗೊಂದು ವಿಚಿತ್ರ ಪತ್ರ…….!

ಭುವನೇಶ್ವರ: ನಿಮ್ಮ ಶಾಲೆ ಅಥವಾ ಕಾಲೇಜು ಪ್ರೇಮಿಗಳ ದಿನದಂದು ಕಾಲೇಜಿಗೆ ಪ್ರವೇಶಿಸಲು ಮತ್ತು ತರಗತಿಗಳಿಗೆ ಹಾಜರಾಗಲು ನಿಮ್ಮ ಗೆಳೆಯರು ಮತ್ತು ಗೆಳತಿಯರನ್ನು ಪಡೆಯುವುದನ್ನು ಕಡ್ಡಾಯಗೊಳಿಸಿದರೆ ಭಾವನೆ ಹೇಗಿರುತ್ತದೆ ಎಂದು ಊಹಿಸಿ. ನಿಜವಾಗಲು ತುಂಬಾ ಚೆನ್ನಾಗಿರುತ್ತದೆ ಎಂದು ನೀವು ಅಂದುಕೊಳ್ಳಬಹುದು. ಇಂಥದ್ದೇ ಒಂದು ನೋಟಿಸ್​ ಒಡಿಶಾದ ಜಗತ್‌ಸಿಂಗ್‌ಪುರದ SVM ಸ್ವಾಯತ್ತ ಕಾಲೇಜಿನಲ್ಲಿ ನಡೆದಿದೆ.

“ಪ್ರೇಮಿಗಳ ದಿನದ ಮೊದಲು ಬಾಯ್‌ಫ್ರೆಂಡ್‌ಗಳನ್ನು ಪಡೆಯಲು ಪ್ರಾಂಶುಪಾಲರು ಹುಡುಗಿಯರಿಗೆ ಆದೇಶಿದ್ದಾರೆ” ಎನ್ನುವ ನೋಟಿಸ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಫೆಬ್ರವರಿ 14 ರ ಮೊದಲು ಹುಡುಗಿಯರು ತಮಗಾಗಿ ಬಾಯ್‌ಫ್ರೆಂಡ್‌ಗಳನ್ನು ಆಯ್ಕೆ ಮಾಡದಿದ್ದರೆ ತರಗತಿಗಳಿಗೆ ಹಾಜರಾಗಲು ಅನುಮತಿಸಲಾಗುವುದಿಲ್ಲ ಎಂಬ ನಿರ್ದೇಶನ ವೈರಲ್ ನೋಟಿಸ್‌ನಲ್ಲಿದೆ. ಹುಡುಗಿಯರು ತಮ್ಮ ಅರ್ಹತೆಯನ್ನು ದೃಢೀಕರಿಸಲು ಪ್ರಾಂಶುಪಾಲರ ಕಚೇರಿಯಲ್ಲಿ ತಮ್ಮ ಗೆಳೆಯರ ಚಿತ್ರಗಳನ್ನು ಸಲ್ಲಿಸಬೇಕಾಗುತ್ತದೆ ಎಂದೂ ನೋಟಿಸ್​ನಲ್ಲಿ ತಿಳಿಸಲಾಗಿದೆ.

ಆದರೆ ಇದು ಅಸಲಿ ನೋಟಿಸ್​ ಅಲ್ಲ ಎಂದು ಕಾಲೇಜು ಹೇಳಿದೆ. ಈ ಕುರಿತು ಮಾತನಾಡಿರುವ ಕಾಲೇಜಿನ ವಿದ್ಯಾರ್ಥಿನಿ ರಶ್ಮಿತಾ ಬೆಹೆರಾ, “ನಾವೆಲ್ಲರೂ ವೈರಲ್ ನೋಟಿಸ್ ನೋಡಿದ್ದೇವೆ. ಇದು ನಿಜ ಅನ್ನಿಸುವುದಿಲ್ಲ. ಇದರಿಂದ ನಮ್ಮ ಕಾಲೇಜಿನ ಹೆಸರಿಗೆ ಧಕ್ಕೆಯಾಗಿದೆ. ನಮ್ಮ ಪ್ರಾಂಶುಪಾಲರು ಒಳ್ಳೆಯ ವ್ಯಕ್ತಿ ಮತ್ತು ಅವರು ಅಂತಹ ಕೆಲಸವನ್ನು ಮಾಡುವುದಿಲ್ಲ ಎಂದಿದ್ದಾರೆ.

ಈ ಸಂಬಂಧ ಕಾಲೇಜಿನ ಪ್ರಾಂಶುಪಾಲ ಬಿಜಯ್ ಪಾತ್ರಾ ಎಫ್‌ಐಆರ್ ದಾಖಲಿಸಿದ್ದಾರೆ. “ಈ ಆದೇಶವನ್ನು ಕಾಲೇಜು ಹೊರಡಿಸಿಲ್ಲ. ವೈರಲ್ ನೋಟಿಸ್ ಮುದ್ರಿಸಿರುವ ಲೆಟರ್ ಹೆಡ್ ನಕಲಿಯಾಗಿದೆ. ಇದು ಕಾಲೇಜಿನ ಸಂಪರ್ಕ ಸಂಖ್ಯೆ ಅಥವಾ ಸರಿಯಾದ ಕ್ರಮದಲ್ಲಿ ಹೆಸರು ಹೊಂದಿಲ್ಲ” ಎಂದು ಅವರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read