ಹಿಂದೆ ಜಗಳವಾಡ್ತಿದ್ದರೆ ಮುಂದೆ ರೀಲ್ಸ್ ಮಾಡಿದ ಹುಡುಗಿ…… ವಿಡಿಯೋ ನೋಡಿ ನೆಟ್ಟಿಗರು ಗರಂ

ಈಗಿನ ದಿನಗಳಲ್ಲಿ ಜನರಿಗೆ ರೀಲ್ಸ್‌ ಹುಚ್ಚು ಎಷ್ಟು ಹೆಚ್ಚಾಗಿದೆ ಅಂದ್ರೆ ಒಬ್ಬ ವ್ಯಕ್ತಿ ಸಾವನ್ನಪ್ಪುತ್ತಿದ್ದರೂ ಆತನನ್ನು ರಕ್ಷಿಸದೆ ಅಲ್ಲೇ ರೀಲ್ಸ್‌ ಮಾಡ್ತಿದ್ದಾರೆ. ಅದಕ್ಕೆ ಈಗ ಇನ್ನೊಂದು ವಿಡಿಯೋ ಸಾಕ್ಷ್ಯವಾಗಿದೆ. ಈ ವಿಡಿಯೋದಲ್ಲಿ ದಾರಿ ಮಧ್ಯೆ ಮೂವರು ಕಿತ್ತಾಡಿಕೊಳ್ತಿದ್ದಾರೆ. ಜುಟ್ಟು ಹಿಡಿದು ಜಗಳ ಮಾಡ್ತಿದ್ದಾರೆ. ಕೆಲವರು ಜಗಳ ಬಿಡಿಸುವ ಪ್ರಯತ್ನ ನಡೆಸಿದ್ರೆ ಮತ್ತೆ ಕೆಲವರು ನಿಂತು ನೋಡ್ತಿದ್ದಾರೆ. ಇದ್ರ ಮಧ್ಯೆ ಹುಡುಗಿಯೊಬ್ಬಳು ರೀಲ್ಸ್‌ ಮಾಡಿದ್ದಾಳೆ.

ಈ ಜಗಳವನ್ನೇ ತನ್ನ ರೀಲ್ಸ್‌ ಗೆ ಬಳಸಿಕೊಂಡಿದ್ದಾಳೆ. ಹಿಂದೆ ಜಗಳವಾಡ್ತಿದ್ದರೆ ಕ್ಯಾಮರಾ ಮುಂದೆ ಹುಡುಗಿ ನಗ್ತಿದ್ದಾಳೆ. ಈ ವಿಡಿಯೋವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದು ಹಿಮಾಚಲ ಪ್ರದೇಶದ ವಿಡಿಯೋ. ಕಳೆದ 2-3 ವರ್ಷಗಳಲ್ಲಿ, ಶಿಮ್ಲಾದ ರಿಡ್ಜ್ ಭಯಾನಕ ಚಟುವಟಿಕೆಗಳ ಹಾಟ್‌ಸ್ಪಾಟ್‌ ಆಗಿ ಮಾರ್ಪಟ್ಟಿದೆ. ರೀಲ್ ತಯಾರಕರು ಈ ಸ್ಥಳವನ್ನು ಆಕ್ರಮಿಸಿಕೊಂಡಿದ್ದಾರೆ ಮತ್ತು ಪ್ರತಿದಿನ ಇಂತಹ ಅಸಂಬದ್ಧ ವೀಡಿಯೊಗಳನ್ನು ಮಾಡಲಾಗುತ್ತದೆ. ಇಂಥ ಜನರ ವಿರುದ್ಧ ಕಠಿಣ ಕಾನೂನುಗಳನ್ನು ತೆಗೆದುಕೊಳ್ಳಬೇಕೆಂದು ಶೀರ್ಷಿಕೆ ಹಾಕಲಾಗಿದೆ.

ಎಕ್ಸ್‌ ನ ಈ ವಿಡಿಯೋ ವೇಗವಾಗಿ ವೈರಲ್‌ ಆಗಿದೆ. ಈವರೆಗೆ 11,000ಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ. ಜಗಳ ಬಿಡಿಸುವ ಬದಲು ಹುಡುಗಿ ರೀಲ್ಸ್‌ ಮಾಡ್ತಿರೋದನ್ನು ನೋಡಿದ ಬಳಕೆದಾರರು ಕೋಪ ವ್ಯಕ್ತಪಡಿಸಿದ್ದಾರೆ.

https://twitter.com/iNikhilsaini/status/1816847552676835549?ref_src=twsrc%5Etfw%7Ctwcamp%5Etweetembed%7Ctwterm%5E1816847552676835549%7Ctwgr%5E1dcce4ddbe60fc3296d68b26e91adafa18272a2f%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fnews18-epaper-dh523feb6a21f54358acc1d5d04a629da5%2Fgirlrecordsreelamiduglystreetfightinternetthinkssheisinsensitive-newsid-n624231974

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read