ಯಾದಗಿರಿ: 18 ವರ್ಷದ ಯುವತಿ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಹುನಸಗಿ ತಾಲೂಕಿನ ಕೊಡೆಕಲ್ ಗ್ರಾಮದಲ್ಲಿ ನಡೆದಿದೆ.
18 ವರ್ಷದ ಸೌಜನ್ಯಾ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ದುಷ್ಕರ್ಮಿಗಳು ಮಗಳನ್ನು ಕಿಡ್ನ್ಯಾಪ್ ಮಾಡಿ ಕೊಲೆಗೈದು ಕಾಲುವೆಗೆ ಬಿಸಾಕಿದ್ದಾರೆ ಎಂದು ಸೌಜನ್ಯಾ ತಂದೆ ಆರೋಪಿಸಿದ್ದಾರೆ.
ಚಿರು, ಪಾಂಡಾ, ರಾಜೇಶ್ ಎಂಬುವವರು ಮಗಳನ್ನು ಕಿಡ್ನ್ಯಾಪ್ ಮಾಡಿ ಕೊಲೆಗೈದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಕೊಡೆಕಲ್ ಠಾಣೆಯಲ್ಲಿ ದೂರು ನೀಡಲು ಹೋದರೆ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದು ಯುವತಿ ತಂದೆ ಅಳಲುತೋಡಿಕೊಂಡಿದ್ದಾರೆ.
ತಕ್ಷಣ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
