ವಾಹನ ದಟ್ಟಣೆ ರಸ್ತೆಯಲ್ಲಿ ಯುವತಿಯ ರೀಲ್ಸ್ ಹುಚ್ಚಾಟ; ಶಾಕಿಂಗ್‌ ವಿಡಿಯೋ ವೈರಲ್

ಇಂದಿನ ಸಾಮಾಜಿಕ ಮಾಧ್ಯಮ ಯುಗದಲ್ಲಿ ಹಲವರು ವೈರಲ್ ಆಗಲು ಅಪಾಯಕಾರಿ ಸಂದರ್ಭಗಳನ್ನೂ ನೋಡದೇ ರೀಲ್ಸ್ ಮಾಡಲು ಮುಂದಾಗ್ತಾರೆ. ನದಿ- ಬೆಟ್ಟ, ಟ್ರಾಫಿಕ್ ಯಾವುದನ್ನೂ ಲೆಕ್ಕಿಸದೇ ನೃತ್ಯ ಮಾಡಿ ವೈರಲ್ ಆಗುವ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಇಂತಹ ಅಪಾಯಕಾರಿ ಸಾಹಸಗಳಲ್ಲಿ ತೊಡಗಿಸಿಕೊಂಡಿರುವವರು ಇತರರ ಜೀವನವನ್ನೂ ಅಪಾಯಕ್ಕೆ ಸಿಲುಕಿಸುತ್ತಾರೆ.

ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಟ್ರಾಫಿಕ್ ಸಿಗ್ನಲ್ ಬಳಿ ವಾಹನ ಸ್ಥಗಿತದ ಸಮಯದಲ್ಲಿ ರಸ್ತೆಯ ಮಧ್ಯದಲ್ಲಿ ಹುಡುಗಿಯೊಬ್ಬಳು ನೃತ್ಯ ಮಾಡಿದ್ದಾಳೆ. ಈ ವೀಡಿಯೊವು ಅನೇಕರನ್ನು ಕೆರಳಿಸಿದೆ. ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು ಸುರಕ್ಷತೆಯ ಬಗ್ಗೆ ಯುವತಿ ತೋರಿರುವ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ.

ರಾಜಾ ಬಾಬು ಎಂಬುವವರು ಟ್ವಿಟರ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಯುವತಿ ಜನನಿಬಿಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾಳೆ. ದ್ವಿಚಕ್ರ ವಾಹನಗಳು ಮತ್ತು ಆಟೋ ರಿಕ್ಷಾಗಳು ಸಾಗುತ್ತಿರುವ ರಸ್ತೆಯಲ್ಲಿ ತನ್ನ ಬ್ಯಾಗ್ ಎಸೆದು ರಸ್ತೆಯ ಮೇಲೆ ನೃತ್ಯ ಮಾಡಲು ಶುರುಮಾಡುತ್ತಾಳೆ.

ಟ್ರಾಫಿಕ್ ನಿಲುಗಡೆ ಸಮಯದಲ್ಲಿ ವಾಹನಗಳು ನಿಂತಂತೆ ಯುವತಿ ನೃತ್ಯವನ್ನು ಮುಂದುವರೆಸುತ್ತಾಳೆ. ವೀಡಿಯೊ ಚಿತ್ರೀಕರಣಗೊಂಡ ಸ್ಥಳ ಇನ್ನೂ ತಿಳಿದಿಲ್ಲ. ಆದರೆ ಈ ವಿಡಿಯೋ 1.5 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ಹಲವರು ಯುವತಿಯ ನಡೆಯನ್ನ ಖಂಡಿಸಿ, ಇದು ಹುಚ್ಚುತನ, ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ತೊಂದರೆ ಮಾಡುವ ಕೃತ್ಯ, ಸಂಚಾರದ ಅಡಚಣೆಗೆ ದಂಡ ವಿಧಿಸಲು ಕಾನೂನು ಇರಬೇಕು ಎಂತೆಲ್ಲಾ ಹೇಳಿದ್ದಾರೆ.

https://twitter.com/GaurangBhardwa1/status/1738181222126494090?ref_src=twsrc%5Etfw%7Ctwcamp%5Etweetembed%7Ctwterm%5E1738181222126494090%7Ctwgr%5Efd137ee538783ddba38b64281cdb499675a7c516%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fgirl-dances-in-the-middle-of-road-during-traffic-halt-angers-internet-4732978

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read