ಮೋದಿ ಪ್ರಚಾರದ ವೇಳೆ ಅಚ್ಚರಿ ಘಟನೆ: ಪ್ರಧಾನಿಯೊಂದಿಗೆ ಮಾತಾಡಲು ಲೈಟ್ ಟವರ್ ಹತ್ತಿದ ಯುವತಿ: ಮೊದಲು ಕೆಳಗಿಳಿದು ಬಾ ಮಗಳೇ ಎಂದು ಕರೆದ ಮೋದಿ

ಹೈದರಾಬಾದ್‌: ತೆಲಂಗಾಣದ ಸಿಕಂದರಾಬಾದ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿಯಲ್ಲಿ ಅವರ ಗಮನವನ್ನು ಸೆಳೆಯಲು ಯುವತಿಯೊಬ್ಬಳು ಲೈಟ್ ಟವರ್ ಏರಿದ್ದಾಳೆ. ಇದನ್ನು ಗಮನಿಸಿದ ಪ್ರಧಾನಿಯವರು ಖುದ್ದಾಗಿ ಮಧ್ಯಪ್ರವೇಶಿಸಿ, ಆಕೆಯನ್ನು ಕೆಳಗಿಳಿಯುವಂತೆ ಹೇಳಿ ಕಾರ್ಯಕ್ರಮಕ್ಕೆ ಅಚ್ಚರಿಯ ತಿರುವು ನೀಡಿದ್ದಾರೆ.

ಪ್ರಧಾನಿಯವರ ಗಮನ ಸೆಳೆಯಲು ಹಾಗೂ ಅವರ ಜತೆ ಮಾತನಾಡಲು ಯುವತಿಯೊಬ್ಬಳು ಮೈದಾನದಲ್ಲಿ ಹಾಕಲಾಗಿದ್ದ ಲೈಟ್ ಟವರ್ ಮೇಲೆ ಹತ್ತಿದಳು. ಈ ದೃಶ್ಯವನ್ನು ನೋಡಿದ ತಕ್ಷಣ ಪ್ರಧಾನಿ ಮೋದಿ ಅವರು ಆಕೆಯ ಜೀವಕ್ಕೆ ಅಪಾಯವನ್ನುಂಟುಮಾಡುವ ಕಾರಣ ಕೆಳಗೆ ಇಳಿಯುವಂತೆ ಪದೇ ಪದೇ ವಿನಂತಿಸಿದ್ದಾರೆ.

ಪ್ರೀತಿಯ ಮಗಳೇ ದಯವಿಟ್ಟು ಕೆಳಗೆ ಇಳಿ. ನಿಮಗೆ ಗಾಯವಾಗುತ್ತದೆ. ಇದು ಸರಿಯಿಲ್ಲ, ನಾವು ನಿಮ್ಮೊಂದಿಗಿದ್ದೇವೆ. ಆದರೆ, ದಯವಿಟ್ಟು ಇಳಿಯಿರಿ. ನಾನು ನಿಮ್ಮ ಮಾತು ಕೇಳುತ್ತೇನೆ. ಶಾರ್ಟ್ ಸರ್ಕ್ಯೂಟ್ ಆಗಿದೆ. ದಯವಿಟ್ಟು ಕೆಳಗೆ ಇಳಿಯಿರಿ. ಇದು ಸರಿ ಇಲ್ಲ ಇದನ್ನು ಮಾಡುವುದರಿಂದ ನಿಮಗೆ ಪ್ರಯೋಜನವಿಲ್ಲ. ನಾನು ನಿಮಗಾಗಿ ಇಲ್ಲಿಗೆ ಬಂದಿದ್ದೇನೆ. ದಯವಿಟ್ಟು ದಯವಿಟ್ಟು ಕೆಳಗೆ ಇಳಿಯಿರಿ ಎಂದು ಕಳವಳಗೊಂಡ ಪ್ರಧಾನಿ ಮೋದಿ ಹೇಳಿದ್ದಾರೆ.

https://twitter.com/ANI/status/1723335266969006555

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read