RCB ಗೆಲ್ಲುವ ವಿಶ್ವಾಸದಲ್ಲಿ ಚಿಪ್ಸ್ ತರಿಸಿದ್ದ ಯುವತಿ; ಕಾಲೆಳೆದ ಸ್ವಿಗ್ಗಿ ಇನ್‌ಸ್ಟಾಮಾರ್ಟ್

ಭಾನುವಾರ ರಾತ್ರಿಯ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್ ವಿರುದ್ಧ ಸೋಲು ಕಂಡು ಐಪಿಎಲ್‌ನ ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗದೇ ಟೂರ್ನಿ ಮುಗಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಈ ವರ್ಷವೂ ನಿರಾಸೆಯಾಗಿದೆ.

ಮೊನ್ನಿನ ಪಂದ್ಯದಲ್ಲಿ ಗೆದ್ದು ಪ್ಲೇಆಫ್‌ಗೆ ಆರ್‌ಸಿಬಿ ತಲುಪಲಿದೆ ಎಂದು ಆಶಿಸುತ್ತಿದ್ದ ಆರ್‌ಸಿಬಿಯ ಲಕ್ಷಾಂತರ ಅಭಿಮಾನಿಗಳಿಗೆ ಭಾರೀ ಬೇಸರವಾಗಿದೆ. ಇದೇ ವೇಳೆ ಆರ್‌ಸಿಬಿ ಅಭಿಮಾನಿಗಳಿಗೆ ಇತರೆ ತಂಡಗಳ ಅಭಿಮಾನಿಗಳು ಭಯಂಕರ ಟ್ರೋಲಿಂಗ್ ಮಾಡುತ್ತಿದ್ದಾರೆ.

ಪಿಜಿಯಲ್ಲಿದ್ದ ಮಹಿಳೆಯೊಬ್ಬರು ಆರ್‌ಸಿಬಿ ಪಂದ್ಯ ಗೆಲ್ಲಲಿದೆ ಎಂಬ ವಿಶ್ವಾಸದಲ್ಲಿ ತಮ್ಮೆಲ್ಲಾ ಪಿಜಿ ಸಹವಾಸಿಗಳಿಗೆ ಕೊಡಲೆಂದು ಚಿಪ್ಸ್ ಆರ್ಡರ್‌ ಮಾಡಿ ತರಿಸಿದ್ದರು. ಈ ವಿಚಾರವನ್ನು ಆಕೆಯ ಸ್ನೇಹಿತೆಯೊಬ್ಬರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ದಿನಸಿ ಡೆಲಿವರಿ ದಿಗ್ಗಜ ಸ್ವಿಗ್ಗಿ ಇನ್‌ಸ್ಟಾಮಾರ್ಟ್, “ಈಗ ನೀವೆಲ್ಲಾ ಆಕೆಗೆ ಟಿಶ್ಯೂ ಪೇಪರ್‌ ಆರ್ಡರ್‌ ಮಾಡಿ,” ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದೆ.

https://twitter.com/idkyar/status/1660356574744039424?ref_src=twsrc%5Etfw%7Ctwcamp%5Etweetembed%7Ctwterm%5E1660604191600177158%7Ctwgr%5

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read