ಪುಣೆ: ಪುಣೆಯಲ್ಲಿ 19 ವರ್ಷದ ಯುವತಿಯೊಬ್ಬಳನ್ನು ಹಾಡಹಗಲೇ ಆಕೆಯ ಸ್ನೇಹಿತ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಪುಣೆಯ ಸದಾಶಿವ ಪೇಟೆಯ ಪೆರುಗೇಟ್ ಪ್ರದೇಶದಲ್ಲಿ ಇದು ನಡೆದಿದ್ದು, ಸಿಸಿ ಟಿವಿಯಲ್ಲಿ ಶಾಕಿಂಗ್ ದೃಶ್ಯ ದಾಖಲಾಗಿದೆ.
ಯುವತಿ ಮತ್ತು ಆರೋಪಿ ಒಂದೇ ಕಾಲೇಜಿನಲ್ಲಿ ಓದಿದ್ದು, ಇತ್ತೀಚೆಗೆ ಆಕೆ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಯುವಕ ಬಂದಿದ್ದಾನೆ. ಆ ವ್ಯಕ್ತಿ ಆಕೆಯೊಂದಿಗೆ ಮಾತನಾಡಲು ಯತ್ನಿಸಿದಾಗ ಯುವತಿ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆತ ಹರಿತವಾದ ಆಯುಧದಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ ಎಂದಿದ್ದಾರೆ ಪೊಲೀಸರು. ಯುವತಿ ಓಡಿಹೋಗಿ ತಪ್ಪಿಸಿಕೊಂಡಿದ್ದಾಳೆ. ಈ ಸಂದರ್ಭದಲ್ಲಿ ಆಕೆಯ ಸ್ವಲ್ಪ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
https://twitter.com/News18lokmat/status/1673582817970888704?ref_src=twsrc%5Etfw%7Ctwcamp%5Etweetembed%7Ctwterm%5E1673582817970888704%7Ctwgr%5Ea9fe8f10a4e6cc413e9964eaa317fb0d98af1c2c%7Ctwcon%5Es1_&ref_url=https%3A%2F%2Fwww.latestly.com%2Fsocially%2Findia%2Fnews%2Fgirl-attacked-in-pune-video-youth-attacks-mpsc-student-with-machete-in-sadashiv-peth-area-chilling-video-surfaces-5228995.html
https://twitter.com/AmirLadka/status/1673609743565467649?ref_src=twsrc%5Etfw%7Ctwcamp%5Etweetembed%7Ctwterm%5E1673609743565467649%7Ctwgr%5Ea9fe8f10a4e6cc413e9964eaa317fb0d98af1c2c%7Ctwcon%5Es1_&ref_url=https%3A%2F%2Fwww.latestly.com%2Fsocially%2Findia%2Fnews%2Fgirl-attacked-in-pune-video-youth-attacks-mpsc-student-with-machete-in-sadashiv-peth-area-chilling-video-surfaces-5228995.html