ಮಗುವಿನ ನಾಮಕರಣದ ಸಮಯದಲ್ಲಿ ನೀಡಬಹುದಾದ ಉಡುಗೊರೆಗಳಿವು

ಮುದ್ದು ಕಂದನಿಗೊಂದು ಚೆಂದದ ಹೆಸರಿಡುವ ದಿನವೇ ನಾಮಕರಣ. ಪುಟಾಣಿ ಮೊದಲ ಬಾರಿಗೆ ತನ್ನ ಹೆಸರು ಕೇಳಿಸಿಕೊಳ್ಳುವ ದಿನ. ಇನ್ನೂ ಈ ನಾಮಕರಣಗಳಿಗೆ ಹೋಗುವಾಗ ಯಾವ ಉಡುಗೊರೆ ನೀಡಬೇಕು ಅನ್ನೋ ಗೊಂದಲ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಚಿನ್ನ, ಬೆಳ್ಳಿಯ ವಸ್ತುಗಳಷ್ಟೇ ಅಲ್ಲದೇ ಕ್ಯೂಟ್ ಆದ ಗಿಫ್ಟ್​ಗಳನ್ನು ನೀಡಬಹುದು. ಹಾಗಾದ್ರೆ ಯಾವೆಲ್ಲಾ ಗಿಫ್ಟ್ ನೀಡಬಹುದು ಅನ್ನೋದನ್ನ ನೋಡೋಣ ಬನ್ನಿ.

ಫ್ಯಾನ್ಸಿ ಹೆಡ್​ವೇರ್​​​ ಆಕ್ಸೆಸರೀಸ್​ : ಹೆಣ್ಣು ಮಗುವಾದರೆ ಚೆಂದದ ಹೆಡ್​ಬ್ಯಾಂಡ್​, ಹೇರ್​ ಕ್ಲಿಪ್​, ಬೇಬಿ ಹೇರ್​ಪಿನ್ಸ್​ ನೀಡಬಹುದು. ಕ್ರೌನ್, ಸ್ಟಾರ್​ ಕ್ಲಿಪ್ಸ್ ಇವೆಲ್ಲಾ ಮುದ್ದಾಗಿ ಕಾಣುತ್ತವೆ.

ಕಸ್ಟಮೈಸ್ಡ್​ ನೇಮ್​​ ಎಂಬ್ರಾಯಿಡರಿ : ಸದ್ಯ ಹೆಚ್ಚು ಟ್ರೆಂಡ್​ನಲ್ಲಿರುವ ಗಿಫ್ಟ್​ ಇದಾಗಿದೆ. ಮಗುವಿನ ಅಡ್ಡ ಹೆಸರನ್ನು ಎಂಬ್ರಾಯಿಡರಿ ಮಾಡಿಸಿ ಕೊಡಬಹುದು. ಈ ಪ್ಲೇಟ್​ ಅನ್ನು ಗೋಡೆಯ ಮೇಲೆ ತೂಗು ಹಾಕಿದರೆ ಮನೆಯಲ್ಲೊಂದು ಮಮತೆಯ ಭಾವ ಹೊಮ್ಮುತ್ತದೆ.

ಫ್ಯಾಮಿಲಿ ಕ್ಯಾರಿಕೇಚರ್​ : ತಂದೆ, ತಾಯಿ ಮತ್ತು ಮಗುವಿನ ಫೋಟೋ ಬಳಸಿ ಕ್ಯೂಟ್​​ ಫ್ಯಾಮಿಲಿ ಎನ್ನುವಂತೆ ಕ್ಯಾರಿಕೇಚರ್ ಮಾಡಿಸಬಹುದು. ಮರದ ಸ್ಟ್ಯಾಂಡ್, ಪೇಪರ್​ ಸ್ಟ್ಯಾಂಡ್ ಸೇರಿದಂತೆ ವಿವಿಧ ಅಳತೆಯಲ್ಲಿ ಇವು ಲಭ್ಯವಿದೆ.

ಬೇಬಿ ಮೌಲ್ಡ್​ : ಮಗುವಿನ ಕೈ, ಕಾಲುಗಳ ಗುರುತನ್ನು ಮೌಲ್ಡ್​​ ಮಾಡಿಸಿ ಅದನ್ನು ಸಹ ಉಡುಗೊರೆಯಾಗಿ ನೀಡಬಹುದು.

ಮೈ ಡೈರಿ : ಮಗುವಿನೊಟ್ಟಿಗೆ ನೀವು ಕಳೆದ ಕ್ಷಣಗಳನ್ನು ಬರವಣಿಗೆ ಮೂಲಕ ದಾಖಲಿಸಿ ಪುಟ್ಟ ಡೈರಿಯೊಂದನ್ನು ನೀಡಬಹುದು. ಮಗು ಬೆಳೆದಂತೆ ಅದನ್ನು ಓದಲು ಆರಂಭಿಸಿದಾಗ ನಿಮ್ಮ ಮೇಲೆ ವಿಶೇಷ ಒಲವು ಮೂಡುತ್ತದೆ. ಜೀವನ ಪೂರ್ತಿ ಮಗುವಿನ ದೃಷ್ಟಿಯಲ್ಲಿ ನೀವು ವಿಶೇಷ ವ್ಯಕ್ತಿಯಾಗಿರುತ್ತೀರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read