ಡೊನಾಲ್ಡ್ ಟ್ರಂಪ್‌ಗೆ ಅಚ್ಚರಿ ಉಡುಗೊರೆ ; ಮುತ್ತಾತನ ಜನನ ಪ್ರಮಾಣಪತ್ರ ಹಸ್ತಾಂತರಿಸಿದ ಜರ್ಮನ್ ಚಾನ್ಸೆಲರ್ !

ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮರ್ಜ್ ಓವಲ್ ಆಫೀಸ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅನಿರೀಕ್ಷಿತ ಉಡುಗೊರೆಯೊಂದನ್ನು ನೀಡಿ ಅಚ್ಚರಿ ಮೂಡಿಸಿದ್ದಾರೆ. ರಿಪಬ್ಲಿಕನ್ ನಾಯಕನ ಮುತ್ತಾತನ (ಅಜ್ಜ) ಜನನ ಪ್ರಮಾಣಪತ್ರವನ್ನು ಮರ್ಜ್, ಟ್ರಂಪ್‌ಗೆ ಹಸ್ತಾಂತರಿಸಿದ್ದಾರೆ.

ಫ್ರೇಮ್ ಮಾಡಲಾದ ಜನನ ಪ್ರಮಾಣಪತ್ರವನ್ನು ಪ್ರಸ್ತುತಪಡಿಸುವಾಗ ಮರ್ಜ್, ಟ್ರಂಪ್‌ನ ಮುತ್ತಾತನ ಬಗ್ಗೆ ವಿವರಗಳನ್ನು ನೀಡಿದರು. “ಇದು ಡೊನಾಲ್ಡ್ ಟ್ರಂಪ್‌ನ ಅಜ್ಜ ಫ್ರೆಡ್ರಿಕ್ ಅವರ ಜನನ ಪ್ರಮಾಣಪತ್ರ. 1869ರಲ್ಲಿ ಬ್ರಾಂಡೆನ್‌ಬರ್ಗ್ ಬಳಿ ಜನಿಸಿದರು. ಅವರ ಮೊದಲ ಹೆಸರು ಫ್ರೆಡ್ರಿಕ್” ಎಂದು ಮರ್ಜ್ ಅಮೆರಿಕ ಅಧ್ಯಕ್ಷರ ಸಮ್ಮುಖದಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

ಟ್ರಂಪ್, ಮರ್ಜ್ ಅವರೊಂದಿಗೆ ಹಸ್ತಲಾಘವ ಮಾಡಿ ಉಡುಗೊರೆಗಾಗಿ ಧನ್ಯವಾದ ಅರ್ಪಿಸಿದರು. ನಂತರ, ಜನನ ಪ್ರಮಾಣಪತ್ರವನ್ನು ಎಲ್ಲಿ ಇಡಬೇಕು ಎಂದು ನೋಡುತ್ತೇನೆ ಎಂದು ಸೂಚಿಸಿದರು.

ಫ್ರೆಡ್ರಿಕ್ ಟ್ರಂಪ್ ಬಗ್ಗೆ: ಫ್ರೆಡ್ರಿಕ್ ಟ್ರಂಪ್, ಅಥವಾ ಫ್ರೆಡೆರಿಕ್ ಟ್ರಂಪ್, ಮಾರ್ಚ್ 14, 1869 ರಂದು ಜರ್ಮನಿಯ ಕಾಲ್‌ಸ್ಟಾಡ್ಟ್‌ನಲ್ಲಿ ಜನಿಸಿದರು. ಅವರು 1885ರಲ್ಲಿ ಯುನೈಟೆಡ್ ಸ್ಟೇಟ್ಸ್‌ಗೆ ವಲಸೆ ಬಂದರು. ರಿಯಲ್ ಎಸ್ಟೇಟ್ ಖರೀದಿಸಲು ಪ್ರಾರಂಭಿಸುವ ಮೊದಲು ಅವರು ಹಲವಾರು ಕೆಲಸಗಳನ್ನು ಮಾಡಿದರು, ಟ್ರಂಪ್ ಕುಟುಂಬ ವ್ಯವಹಾರಕ್ಕೆ ಅಡಿಪಾಯ ಹಾಕಿದರು. ಫ್ರೆಡ್ರಿಕ್ 1918ರಲ್ಲಿ ನ್ಯೂಯಾರ್ಕ್‌ನ ಕ್ವೀನ್ಸ್‌ನಲ್ಲಿ ಜ್ವರ ಸಾಂಕ್ರಾಮಿಕದಿಂದ ನಿಧನರಾದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read