BIG UPDATE : ‘ಗೃಹಲಕ್ಷ್ಮಿ’ ಹಣ ಬಾರದ ಯಜಮಾನಿಯರ ಗಮನಕ್ಕೆ ; ತಕ್ಷಣ ಈ ಕೆಲಸ ಮಾಡಲು ಸೂಚನೆ..!

ಗೃಹಲಕ್ಷ್ಮಿ ಯೋಜನೆಯಡಿ ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಮಾಹೆಯಾನ ರೂ. 2 ಸಾವಿರ ಗಳನ್ನು ಅವರ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರ ನಗದು ಜಮೆ ಮಾಡಲಾಗುತ್ತಿದೆ. ಪ್ರಸ್ತುತ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ನಗದು ಜಮೆಯಾಗದೇ ಐಟಿ ಮತ್ತು ಜಿಎಸ್ಟಿ ಪಾವತಿದಾರರೆಂದು ಅರ್ಜಿ ಸ್ಥಿತಿಯಲ್ಲಿ ಕಂಡು ಬಂದಿರುತ್ತದೆ.

ಐಟಿ ಮತ್ತು ಜಿಎಸ್ಟಿ ಪಾವತಿದಾರರು ಹೊರತುಪಡಿಸಿ ಐಟಿ ಮತ್ತು ಜಿಎಸ್ಟಿಯಡಿ ಸೇರ್ಪಡೆಯಾಗದ ಫಲಾನುಭವಿಗಳಿಗೆ ನಗದು ಪಾವತಿಯಾಗದೇ ಸಮಸ್ಯೆ ಇದ್ದಲ್ಲಿ ಅಂತಹ ಫಲಾನುಭವಿಗಳು ತಮ್ಮ ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳಾದ ಪಡಿತರಚೀಟಿ ಸಂಖ್ಯೆ, ಪಾನ್ ನಂಬರ್, ಆದಾಯ ತೆರಿಗೆ ಇಲಾಖೆಯಿಂದ ನೀಡಿದ ಪತ್ರ, ವಾಣಿಜ್ಯ ತೆರಿಗೆ ಇಲಾಖೆಯಿಂದ ನೀಡಿದ ಪತ್ರ, ನೋಟರಿಯಿಂದ ಪಡೆದ ಪತ್ರ, ಆಡಿಟರ್ರವರಿಂದ ಪಡೆದ ಪತ್ರ, ಅರ್ಜಿದಾರರ ಮನವಿ ಪತ್ರ ನೀಡಲು ಕ್ರಮವಹಿಸುವುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಲು ದೂರವಾಣಿ ಸಂಖ್ಯೆ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಮಡಿಕೇರಿ : 08272-295087, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಸೋಮವಾರಪೇಟೆ : 08276-200023, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಪೊನ್ನಂಪೇಟೆ 08274- 201878 ನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ವಿಭಾಗದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನಟರಾಜು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read