ತುಪ್ಪದಿಂದ್ಲೂ ಇದೆ ಆರೋಗ್ಯದ ಮೇಲೆ ದುಷ್ಪರಿಣಾಮ; ನಿಮಗಿದು ತಿಳಿದಿರಲಿ

ಯಾವ ಆಹಾರ ಪದಾರ್ಥವೇ ಆದ್ರೂ ಅದನ್ನು ಸರಿಯಾದ ಕ್ರಮದಲ್ಲಿ ಸೇವನೆ ಮಾಡದೇ ಇದ್ರೆ ಆರೋಗ್ಯಕ್ಕೆ ಅಪಾಯ ಗ್ಯಾರಂಟಿ. ತುಪ್ಪ ಕೂಡ ಇವುಗಳಲ್ಲೊಂದು. ತುಪ್ಪ ಎಲ್ಲರ ದೇಹಕ್ಕೂ ಹೊಂದಿಕೆಯಾಗುವುದಿಲ್ಲ. ಅನೇಕರಿಗೆ ತುಪ್ಪ ತಿಂದರೆ ಅಜೀರ್ಣವಾಗಬಹುದು. ಯಾರ್ಯಾರೆಲ್ಲಾ ತುಪ್ಪದಿಂದ ದೂರವಿರಬೇಕು ಅನ್ನೋದನ್ನು ನೋಡೋಣ.

ಯಾವುದೇ ರೀತಿಯ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರು ತುಪ್ಪದಿಂದ ದೂರವಿರಬೇಕು. ನಿಮಗೆ ಗ್ಯಾಸ್, ಅಜೀರ್ಣ ಅಥವಾ ಹೊಟ್ಟೆ ಉಬ್ಬರಿಸಿದ್ದರೆ ತುಪ್ಪವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ತುಪ್ಪ ಸೇವನೆ ಮಾಡಿದ್ರೆ ನಿಮ್ಮ ಆರೋಗ್ಯವು ಮತ್ತಷ್ಟು ಹದಗೆಡಬಹುದು.

ಇದಲ್ಲದೇ ಲಿವರ್‌ಗೆ ಸಂಬಂಧಿಸಿದ ಸಮಸ್ಯೆ ಇರುವವರು ಕೂಡ ತುಪ್ಪ ಸೇವನೆ ಮಾಡದಿರುವುದು ಸೂಕ್ತ. ತುಪ್ಪ ತಿಂದರೆ ನಿಮ್ಮ ಸಮಸ್ಯೆ ಹೆಚ್ಚಾಗಬಹುದು. ಲಿವರ್‌ನಲ್ಲಿ ಯಾವುದೇ ರೀತಿಯ ಸಮಸ್ಯೆಯಾದರೆ ನೀವು ಸೇವಿಸಿದ ತುಪ್ಪ ಸರಿಯಾಗಿ ಜೀರ್ಣವಾಗುವುದಿಲ್ಲ. ಹಾಗಾಗಿ ನಿಮ್ಮ ಡಯಟ್‌ ಚಾರ್ಟ್‌ನಿಂದ ತುಪ್ಪವನ್ನು ಬಿಟ್ಟುಬಿಡುವುದು ಒಳ್ಳೆಯದು.

ಶೀತ, ಕಫ, ಕೆಮ್ಮಿನ ಸಮಸ್ಯೆ ಇದ್ದರೆ ತುಪ್ಪ ತಿನ್ನಬಾರದು. ಈ ಸಮಯದಲ್ಲಿ ತುಪ್ಪ ಸೇವನೆ ಮಾಡಿದ್ರೆ ನಿಮ್ಮ ಸಮಸ್ಯೆಗಳು ಹೆಚ್ಚಾಗುತ್ತವೆ. ತುಪ್ಪ ತಿನ್ನುವುದರಿಂದ ದೇಹದಲ್ಲಿ ಕಫ ಹೆಚ್ಚಾಗುತ್ತದೆ. ಹಾಗಾಗಿ ನೆಗಡಿ, ಕೆಮ್ಮು ಅಥವಾ ಜ್ವರ ಇದ್ದರೆ ತುಪ್ಪ ಬಳಸಬೇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read