ಜ್ಯೂಸ್ ಕುಡಿಯುವವರಿಗೆ ಬಿಗ್ ಶಾಕ್: ಪಾನೀಯದಲ್ಲಿ ಮೂತ್ರ ಬೆರೆಸಿ ಗ್ರಾಹಕರಿಗೆ ಕೊಟ್ಟ ಮಾರಾಟಗಾರ, ಪುತ್ರ ಅರೆಸ್ಟ್

ಗಾಜಿಯಾಬಾದ್: ಪಾನೀಯಗಳಲ್ಲಿ ಮೂತ್ರ ಬೆರೆಸಿ ಗ್ರಾಹಕರಿಗೆ ಕೊಟ್ಟ ಆರೋಪದ ಮೇಲೆ ಶುಕ್ರವಾರ ಜ್ಯೂಸ್ ಮಾರಾಟಗಾರನನ್ನು ಬಂಧಿಸಲಾಗಿದೆ.

ಮೂತ್ರದೊಂದಿಗೆ ಬೆರೆಸಿದ ಹಣ್ಣಿನ ರಸವನ್ನು ಗ್ರಾಹಕರಿಗೆ ನೀಡಿದ್ದಕ್ಕಾಗಿ ಮಾರಾಟಗಾರನ 15 ವರ್ಷದ ಪುತ್ರನನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಣ್ಣಿನ ರಸದಲ್ಲಿ ಮಾನವ ಮೂತ್ರ ಬೆರೆಸಿ ಗ್ರಾಹಕರಿಗೆ ಜ್ಯೂಸ್ ಮಾರಾಟಗಾರ ನೀಡುತ್ತಿದ್ದಾನೆ ಎಂದು ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಅವರನ್ನು ಬಂಧಿಸಲಾಗಿದೆ. ಆರೋಪಿಯನ್ನು ಅಮೀರ್ ಎಂದು ಗುರುತಿಸಲಾಗಿದೆ ಎಂದು ಎಸಿಪಿ ಅಂಕುರ್ ವಿಹಾರ್ ಭಾಸ್ಕರ್ ವರ್ಮಾ ಶುಕ್ರವಾರ ತಿಳಿಸಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಆಗಮಿಸಿ ಆತನ ಜ್ಯೂಸ್ ಸ್ಟಾಲ್ ನಲ್ಲಿ ತಪಾಸಣೆ ನಡೆಸಿ ಮೂತ್ರ ತುಂಬಿದ ಪ್ಲಾಸ್ಟಿಕ್ ಕ್ಯಾನ್ ವಶಪಡಿಸಿಕೊಂಡಿದ್ದಾರೆ. ಬಾಲಾಪರಾಧಿಯನ್ನು ಬಂಧಿಸಲಾಗಿದ್ದು, ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವರ್ಮಾ ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read