ಆಗಾಗ ಕಣ್ಮುಂದೆ ಬರೋ ಅಪಘಾತದ ವಿಡಿಯೋಗಳು ಬೆಚ್ಚಿಬೀಳಿಸುತ್ತೆ. ಕೆಲ ಘಟನೆಗಳಂತೂ ಆಕಸ್ಮಿಕವೋ ಇಲ್ಲ ಉದ್ದೇಶಪೂರಕವೋ ಅನ್ನೊದೇ ಅನುಮಾನವಾಗಿಡುತ್ತೆ. ಇತ್ತೀಚೆಗೆ ಅಂತದ್ದೇ ಒಂದು ಭಯಾನಕ ವಿಡಿಯೋ ಒಂದು ವೈರಲ್ ಆಗಿದೆ. ಈ ಘಟನೆ ನಡೆದಿರೋದು ಉತ್ತರಪ್ರದೇಶದ ಗಾಜಿಯಾಬಾದ್‌ನ ಸೆಕ್ಟರ್ 10ರಲ್ಲಿ.
ಈ ವಿಡಿಯೋದಲ್ಲಿ ಆಡಿ ಕಾರೊಂದು, ಕಟ್ಟಡದ ಗೇಟ್ ಮುಂದೆ ನಿಂತಿರೋ ಜನರ ಮೇಲೆ ಹಾಯ್ದು ಬಿಡುತ್ತೆ. ಅಲ್ಲಿ ಓರ್ವ ವ್ಯಕ್ತಿ ಸ್ಕೂಟಿ ಮೇಲೆ ಕುಳಿತಿರುತ್ತಾನೆ. ಆದರೂ ಕಾರು ನಿಲ್ಲೋಲ್ಲ, ಒಮ್ಮೆಲೆ ವೇಗ ಹೆಚ್ಚು ಮಾಡಿಕೊಂಡು ಹೋಗುತ್ತೆ. ಅದೃಷ್ಟವಶಾತ್ ಸ್ಕೂಟಿ ಮೇಲಿರುವ ವ್ಯಕ್ತಿಗೆ ಏನೂ ಆಗೋಲ್ಲ. ಆದರೆ ಅಲ್ಲೇ ನಿಂತಿದ್ದ ಆ ಅಪಾರ್ಟ್‌ಮೆಂಟ್‌ನ ಗಾರ್ಡ್ ಮೇಲೆಯೇ ಆ ಕಾರು ಹತ್ತಿ ಹೋಗುತ್ತೆ.
ಅಸಲಿಗೆ ಈ ಘಟನೆ ಹಿಂದಿರುವ ಕಾರಣ, ಓರ್ವ ಮಹಿಳೆ ಮತ್ತು ಆಕೆಯ ಅತ್ತೆಯ ನಡುವೆ ನಡೆಯುತ್ತಿದ್ದ ವರದಕ್ಷಿಣೆ ಕಿರುಕುಳದ ವಾದ ವಿವಾದ. ಅದು ಪರಿಸ್ಥಿತಿ ಕೈಮೀರುತ್ತಿದೆ ಅಂದಾಕ್ಷಣ, ಆ ಮಹಿಳೆಯ ಮತ್ತು ಆಕೆಯ ಕುಟುಂಬದ ಸದಸ್ಯರು ಅಲ್ಲಿಂದ ಓಡಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ಕೊಟ್ಟಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಈಗ ವೈರಲ್ ಆಗಿದ್ದು, ಈ ವಿಡಿಯೋ ನೋಡಿ ನೆಟ್ಟಿಗರು ದಂಗಾಗಿ ಹೋಗಿದ್ದಾರೆ. ಅದು ಆಕಸ್ಮಿಕವಾಗಿಯೇ ನಡೆದಿರುವ ಘಟನೆ ಎಂದು ಎಲ್ಲರೂ ಕಿಡಿಕಾರಿದ್ದಾರೆ. ಅಷ್ಟೆಅಲ್ಲ ಜನರು ಕಾರ್ ಹಾಯ್ದಿದ್ದರಿಂದ ಗಾಯಕ್ಕೊಳಗಾಗಿದ್ದಾರೆ ಅನ್ನೋದು ಗೊತ್ತಾಗಿದ್ದರೂ, ಕಾರು ನಿಲ್ಲಿಸದೇ ಹಾಗೆಯೇ ಹೋಗಿದ್ದನ್ನ ನೋಡಿ, ಎಲ್ಲರೂ ಕಾರ್ ಚಾಲಕನಿಗೆ ಶಾಪ ಹಾಕಿದ್ದಾರೆ.
https://twitter.com/bstvlive/status/1612713995735302144?ref_src=twsrc%5Etfw%7Ctwcamp%5Etweetembed%7Ctwterm%5E1612762770793181185%7Ctwgr%5E6ecc859d55bc7ce2ad6cfef01afd4cbab6eb2c93%7Ctwcon%5Es2_&ref_url=https%3A%2F%2Fwww.freepressjournal.in%2Fviral%2Fghaziabad-crime-woman-brother-run-over-by-audi-car-in-vasundhara-fir-registered-against-in-laws-cctv-footage-surfaces
https://twitter.com/ANINewsUP/status/1612768966199459840?ref_src=twsrc%5Etfw%7Ctwcamp%5Etweetembed%7Ctwterm%5E1612768966199459840%7Ctwgr%5E6ecc859d55bc7ce2ad6cfef01afd4cbab6eb2c93%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fghaziabad-crime-woman-brother-run-over-by-audi-car-in-vasundhara-fir-registered-against-in-laws-cctv-footage-surfaces