ಪತಿಯೊಂದಿಗಿನ ಫೋಟೋಗಳನ್ನು ಡಿಲೀಟ್ ಮಾಡಿದ ನಟಿ…! ಡಿವೋರ್ಸ್ ವದಂತಿಗೆ ಹೀಗಿತ್ತು ‘ಗಜಿನಿ’ ಖ್ಯಾತಿಯ ಆಸಿನ್ ಉತ್ತರ

ಬಾಲಿವುಡ್ ನ ಗಜಿನಿ ಚಿತ್ರದಲ್ಲಿ ನಟಿಸಿ ಹೆಸರು ಮಾಡಿದ್ದ ನಟಿ ಆಸೀನ್ ದಾಂಪತ್ಯದಲ್ಲಿ ಬಿರುಕು ಮೂಡಿದೆಯಾ? ಹೀಗೊಂದು ಸುದ್ದಿ ಹರಿದಾಡ್ತಿದ್ದು ಅದಕ್ಕೆ ನಟಿ ಆಸೀನ್ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಪತಿ ಮೈಕ್ರೋಮ್ಯಾಕ್ಸ್ ಸಹ-ಸಂಸ್ಥಾಪಕ ರಾಹುಲ್ ಶರ್ಮಾಗೆ ನಟಿ ಆಸಿನ್ ತೊಟ್ಟುಮ್ಕಲ್ ಅವರು ಡಿವೋರ್ಸ್ ನೀಡುತ್ತಿದ್ದಾರೆ ಎಂಬ ವಂದತಿ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸಿ ಡಿವೋರ್ಸ್ ಸುದ್ದಿ ಊಹಾಪೋಹವಷ್ಟೇ. ಆಧಾರರಹಿತ ಸುದ್ದಿಗಳನ್ನು ಹರಡಬೇಡಿ ಎಂದಿದ್ದಾರೆ.

ತಮ್ಮ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಆಸಿನ್ “ಈಗ ನಮ್ಮ ಬೇಸಿಗೆ ರಜೆಯ ನಡುವೆ ಅಕ್ಷರಶಃ ಪರಸ್ಪರ ಕುಳಿತುಕೊಂಡು ನಮ್ಮ ಉಪಹಾರವನ್ನು ಆನಂದಿಸುತ್ತಿದ್ದೀವಿ. ಕೆಲವು ಅತ್ಯಂತ ಕಾಲ್ಪನಿಕ ಮತ್ತು ಸಂಪೂರ್ಣವಾಗಿ ಆಧಾರರಹಿತವಾದ ‘ಸುದ್ದಿ’ಗಳನ್ನು ಕಂಡಿದ್ದೇವೆ. ನಾವು ನಮ್ಮ ಕುಟುಂಬಗಳೊಂದಿಗೆ ನಮ್ಮ ಮನೆಯಲ್ಲಿ ಕುಳಿತು ನಮ್ಮ ಮದುವೆ ಯೋಜನೆಗಳನ್ನು ಮಾಡುತ್ತಿದ್ದ ಸಮಯವನ್ನು ನೆನಪಿಸುತ್ತದೆ. ನಾವು ಬೇರ್ಪಟ್ಟಿದ್ದೇವೆ ಎಂಬ ಸುದ್ದಿಯನ್ನ ಕೇಳಿದ್ದೇವೆ.. Seriously?! ಇದಕ್ಕಾಗಿ ಈ ಅದ್ಭುತ ರಜಾದಿನದಲ್ಲಿ 5 ನಿಮಿಷಗಳನ್ನು ವ್ಯರ್ಥ ಮಾಡಿದ್ದಕ್ಕಾಗಿ ನಿರಾಶೆಗೊಂಡಿದ್ದೇನೆ!” ಎಂದು ಹೇಳಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಪತಿ ರಾಹುಲ್ ಜೊತೆಗಿನ ಫೋಟೋಗಳಲ್ಲಿ ಒಂದನ್ನು ಹೊರತುಪಡಿಸಿ ಎಲ್ಲಾ ಫೋಟೋಗಳನ್ನು ಆಸಿನ್ ಡಿಲೀಟ್ ಮಾಡಿದ ನಂತರ ಇಬ್ಬರು ಬೇರೆ ಬೇರೆಯಾಗ್ತಿದ್ದಾರೆಂಬ ವದಂತಿ ಹರಡಿತು.

ಗಜನಿ ನಂತರ, ಲಂಡನ್ ಡ್ರೀಮ್ಸ್, ರೆಡಿ, ಹೌಸ್‌ಫುಲ್ 2 ಮತ್ತು ಬೋಲ್ ಬಚ್ಚನ್‌ನಂತಹ ಹಿಂದಿ ಚಲನಚಿತ್ರಗಳಲ್ಲಿ ಆಸಿನ್ ಕಾಣಿಸಿಕೊಂಡರು.

ಮೈಕ್ರೋಮ್ಯಾಕ್ಸ್ ಸಹ-ಸಂಸ್ಥಾಪಕ ರಾಹುಲ್ ಶರ್ಮಾ ಅವರನ್ನು 2016 ರಲ್ಲಿ ಕ್ರಿಶ್ಚಿಯನ್ ಮತ್ತು ಹಿಂದೂ ವಿವಾಹ ಪದ್ಧತಿಯಲ್ಲಿ ಆಸಿನ್ ಮದುವೆಯಾದರು. ಮದುವೆಯ ನಂತರ ಆಸಿನ್ ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡರು. ಅಕ್ಟೋಬರ್ 24, 2017 ರಂದು ಹುಟ್ಟಿದ ಮಗಳನ್ನು ಸ್ವಾಗತಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read