ಭಾರತೀಯರ ಇಂಗ್ಲಿಷ್ ಬಗ್ಗೆ ಜರ್ಮನ್ ಇನ್ಫ್ಲುಯೆನ್ಸರ್ ವ್ಯಂಗ್ಯ: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ | Watch

ಭಾರತೀಯರು ‘ಎಕ್ಸ್‌ಪೈರ್ಡ್’ ಪದವನ್ನು ನಿಧನರಾದ ವ್ಯಕ್ತಿಗಳನ್ನು ಉಲ್ಲೇಖಿಸಲು ಬಳಸುವುದರ ಬಗ್ಗೆ ಜರ್ಮನ್ ಇನ್‌ಫ್ಲುಯೆನ್ಸರ್ ಒಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಇಂಡಿಯಾ ! ವಾಟ್ ಈಸ್ ಗೋಯಿಂಗ್ ಆನ್ ?” ಎಂದು ಆಕೆಯ ವಿಡಿಯೋದಲ್ಲಿ ಹೇಳಲಾಗಿದೆ. ಆದಾಗ್ಯೂ, ಆನ್‌ಲೈನ್‌ನಲ್ಲಿ ಭಾರತವನ್ನು ಹೊಗಳುವುದು ಮತ್ತು ಅದರ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದನ್ನು ಹೆಚ್ಚಾಗಿ ಕಾಣುವ ಇನ್‌ಫ್ಲುಯೆನ್ಸರ್, ಆಕೆಯ ವಿನೋದ ಮತ್ತು ಆಶ್ಚರ್ಯಕರ ಪ್ರತಿಕ್ರಿಯೆಗಾಗಿ ಟೀಕೆಗಳನ್ನು ಸ್ವೀಕರಿಸಿದರು.

“ಇಂಡಿಯಾ ವೈ ಡು ಯು ಯೂಸ್ ದ ವರ್ಡ್ ಎಕ್ಸ್‌ಪೈರ್ಡ್” ವಿಡಿಯೋದಲ್ಲಿ, ಭಾರತೀಯರು ‘ಎಕ್ಸ್‌ಪೈರ್ಡ್’ ಪದವನ್ನು ಬಳಸುವುದನ್ನು ನೋಡಿ ಇನ್‌ಫ್ಲುಯೆನ್ಸರ್ ನಕ್ಕಿದ್ದಾರೆ. ವ್ಯಂಗ್ಯ ಮಾಡುತ್ತಾ, “ಯಾರಾದರೂ ಸತ್ತಿದ್ದಾರೆ ಎಂದು ಹೇಳಲು ನೀವು ಎಕ್ಸ್‌ಪೈರ್ಡ್ ಪದವನ್ನು ಏಕೆ ಬಳಸುತ್ತೀರಿ ? ಇದು ಇಡೀ ಭಾರತದಲ್ಲಿ ಇದೆಯೋ ಅಥವಾ ಕೆಲವೆಡೆ ಮಾತ್ರವೋ ನನಗೆ ಗೊತ್ತಿಲ್ಲ, ಆದರೆ ಯಾರಾದರೂ ಸತ್ತಿದ್ದಾರೆ ಎಂದು ಹೇಳಲು ಅವರು ‘ಎಕ್ಸ್‌ಪೈರ್ಡ್’ ಪದವನ್ನು ಬಳಸುತ್ತಾರೆ ಎಂದು ಭಾರತೀಯರಿಂದ ನನಗೆ ತಿಳಿದಿದೆ” ಎಂದು ಕೇಳಿದರು.

ಯಾರಾದರೂ ಸತ್ತಿದ್ದಾರೆ ಎಂದು ಹೇಳಲು ನೀವು ಎಕ್ಸ್‌ಪೈರ್ಡ್ ಪದವನ್ನು ಬಳಸುತ್ತೀರಾ? ಸರಿ…… ಪ್ರಿಸ್ಕ್ರಿಪ್ಷನ್ ಎಕ್ಸ್‌ಪೈರ್ ಆಗುತ್ತದೆ, ಅಥವಾ ಆಹಾರ ಎಕ್ಸ್‌ಪೈರ್ ಆಗುತ್ತದೆ…… ಆದರೆ ವ್ಯಕ್ತಿ ? ದಯವಿಟ್ಟು ಹೇಳಿ, ಎಕ್ಸ್‌ಪೈರ್ಡ್ ಪದ ಬಳಕೆ ಇತರ ದೇಶಗಳಲ್ಲೂ ಇದೆಯೇ ? ನನಗೆ ಆಸಕ್ತಿ ಇದೆ ತಿಳಿಸಿ” ಎಂದಿದ್ದಾರೆ.

ಆಕೆಗೆ ಪ್ರತಿಕ್ರಿಯಿಸಿದ ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಕಾಮೆಂಟ್ ವಿಭಾಗದಲ್ಲಿ, “ನೀವು, ಶಾಲೆಗೆ ಹಿಂತಿರುಗಿ…… ಇದು ನಿಮ್ಮ ಕಡಿಮೆ ಶಬ್ದಕೋಶವನ್ನು ತೋರಿಸುತ್ತದೆ. ಅಂತಿಮವಾಗಿ, ಭಾರತೀಯರು ನಿಮಗೆ ನಿಘಂಟಿನ ಹೊಸ ಪದವನ್ನು ಕಲಿಸಿದ್ದಕ್ಕಾಗಿ ನನಗೆ ಸಂತೋಷವಾಗಿದೆ” ಎಂದು ತಿರುಗೇಟು ನೀಡಿದ್ದಾರೆ. “ವೈದ್ಯಕೀಯ ಪದಗಳಲ್ಲಿ ಆಸ್ಪತ್ರೆಗಳಲ್ಲಿ ಸಾವನ್ನು ಉಲ್ಲೇಖಿಸಲು ಎಕ್ಸ್‌ಪೈರ್ಡ್ ಅನ್ನು ಬಳಸಲಾಗುತ್ತದೆ” ಎಂದು ಇನ್ನೊಬ್ಬರು ವಿವರಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, “ಇದರ ಬಗ್ಗೆ ನಗುವುದನ್ನು ನಿಲ್ಲಿಸಿ, ನಿಮ್ಮ ಅನುಯಾಯಿಗಳು ಎಕ್ಸ್‌ಪೈರ್ಡ್ ಆಗಬಹುದು” ಎಂದು ವ್ಯಂಗ್ಯವಾಡಿದ್ದಾರೆ.

 

View this post on Instagram

 

A post shared by The_Induflencer (@the_induflencer)

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read