ಬಂದೇ ಬಿಡ್ತು ಸ್ಪೆಷಲ್ ಐಸ್‌ಕ್ರಿಮ್: ‘ಮಿಡತೆ ಹುಳ’ದ ಟೇಸ್ಟ್ ತಿನ್ನೋದಕ್ಕೆ ನೀವು ರೆಡಿನಾ‌ ? ಇಲ್ಲಿದೆ ವಿವರ

ಸುಡು ಸುಡೋ ಬಿಸಿಲಿನಲ್ಲಿ, ಕೂಲ್ ಕೂಲ್ ಐಸ್ ಕ್ರಿಮ್ ಯಾರಿಗೆ ಇಷ್ಟ ಆಗೋಲ್ಲ ಹೇಳಿ. ಅದರಲ್ಲೂ ಚಾಕಲೇಟ್, ಮ್ಯಾಂಗೋ, ಸ್ಟ್ರಾಬೆರಿ, ಪಿಸ್ತಾ, ಬದಾಮ್, ಬಟರ್‌ಸ್ಕಾಚ್ ಹೀಗೆ ಒಂದಾ ಎರಡಾ……!

ಈಗ ಐಸ್ ಕ್ರಿಮ್ ಪ್ರಿಯರಿಗೆ ಒಂದು ಗುಡ್ ನ್ಯೂಸ್. ಮಾರುಕಟ್ಟೆಗೆ ಬಂದಿದೆ ಇನ್ನೊಂದು ಟೇಸ್ಟಿ ಐಸ್‌ಕ್ರಿಮ್, ಆದರೆ ಈ ಐಸ್‌ಕ್ರಿಮ್ ಸ್ಪೆಷಾಲಿಟಿ ಏನು ಅಂತ ಗೊತ್ತಾದ್ರೆ ನಿಮಗೆ ವಾಕರಿಕೆನೇ ಬಂದು ಬಿಡುತ್ತೆ.

ಎಸ್……. ನಾವು ಹೇಳಿರೋದು ನಿಜ. ಜರ್ಮನಿಯ ರೊಟಿನ್ ಬರ್ಗ್ ಆಮ್ ನೆಕರ್‌ನಲ್ಲಿರುವ ಥಾಮಸ್ ಮೈಕೋಲಿನೋ, ಅವರ ಐಸ್‌ಕ್ರಿಮ್ ಪಾರ್ಲ‌ರ್ ನ ಮೆನು ಲೀಸ್ಟ್‌ನಲ್ಲಿ ಟಾಪ್‌ಲಿರುವ ಐಸ್‌ಕ್ರಿಮ್ ಇದು.

ಅಷ್ಟಕ್ಕೂ ಈ ಐಸ್‌ಕ್ರಿಮ್ ಸ್ಪೆಷಾಲಿಟಿ ಏನು ಗೊತ್ತಾ ? ಈ ಐಸ್‌ಕ್ರಿಮ್ ಟಾಪ್ ಮೇಲೆ ಚೆರ್ರಿ ಹಣ್ಣು ಇಡೋಲ್ಲ ಬದಲಾಗಿ ಮಿಡತೆ ಹುಳಗಳನ್ನ ಇಟ್ಟು ತಿನ್ನುವುದಕ್ಕೆ ಕೊಡಲಾಗುತ್ತೆ .

ಈ ಪಾರ್ಲರ್ ಮಾಲೀಕರಾದ ಥಾಮಸ್ ‘ನಾನು ಹೊಸ-ಹೊಸ ಪ್ರಯೋಗಕ್ಕೆ ಹೆಚ್ಚು ಆದ್ಯತೆ ಕೊಡುತ್ತೇನೆ. ಈ ಹಿಂದೆಯೂ ಬೇರೆ-ಬೇರೆ ರುಚಿಯ ಐಸ್‌ಕ್ರಿಮ್‌ ಗಳನ್ನ ತಯಾರಿಸಿದೆ. ಈಗ ಮಿಡತೆ ಕೀಟಗಳನ್ನ ಬಳಸಿ ಐಸ್‌ಕ್ರಿಮ್‌ನ್ನ ಸಿದ್ಧಪಡಿಸಿದ್ದೇನೆ. ಈ ರೀತಿಯ ಐಸ್‌ಕ್ರಿಮ್‌ಗಳು ಮಾರುಕಟ್ಟೆಯಲ್ಲಿ ಸಿಗುವುದೇ ಅಪರೂಪʼ ಎಂದಿದ್ದಾರೆ.

ಆಹಾರದಲ್ಲಿ ಕೀಟಗಳ ಬಳಕೆ ಮಾಡುವುದು ಸಾಮಾನ್ಯ. ಆದರೆ ಈಗ ಕೀಟಗಳನ್ನ ಬಳಸಿ ಹೊಸ ರುಚಿಯ ಐಸ್ ಕ್ರಿಮ್ ತಯಾರಿಸಲಾಗಿದೆ. ಇದು ವಿಚಿತ್ರ ಅನಿಸಿದರೂ ತುಂಬಾನೇ ಟೇಸ್ಟಿ ಆಗಿರುವ ಐಸ್‌ಕ್ರಿಮ್ ಇದಾಗಿದೆ. ಮಿಡತೆ ಹೊರತು ಪಡೆಸಿ ಜೀರುಂಡೆ ಹಾಗೂ ಬೇರೆ ಬೇರೆ ಕೀಟಗಳನ್ನ ಫ್ರಿಡ್ಜ್‌ನಲ್ಲಿಟ್ಟು ಇಲ್ಲಾ ಒಣಗಿಸಿ ಉಪಯೋಗಿಸಬಹುದು, ಯುರೋಪಿಯನ್ ಆಹಾರ ಸಂಸ್ಕರಣಾ ಸಂಘಟನೆ ಸಹ ಇದಕ್ಕೆ ಈಗಾಗಲೇ ಅನುಮತಿ ಕೊಡಲಾಗಿದೆ.

ಈ ಐಸ್‌ಕ್ರಿಮ್‌ನಲ್ಲಿ ಒಣಗಿದ ಮಿಡತೆ ಕೀಟದ ಪೌಡರ್ ಹೊರತಾಗಿ ಜೇನುತುಪ್ಪ, ಕ್ರಿಮ್, ವೆನಿಲ್ಲಾ, ಹಾಲು ಇವುಗಳನ್ನ ಬಳಸಲಾಗುತ್ತೆ. ಇದೊಂದು ಕಲ್ಪನೆಗೂ ಮೀರಿದ ಐಸ್‌ಕ್ರಿಮ್ ಅನ್ನುತ್ತಾರೆ ಥಾಮಸ್. ಕೆಲವರು ಈ ಐಸ್‌ಕ್ರಿಮ್ ನೋಡಿ ವಾಕರಿಕೆ ಪಟ್ಟರೂ ಇನ್ನೂ ಕೆಲವರು ಈ ಐಸ್‌ಕ್ರಿಮ್‌ನ್ನ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read