HomeKarnatakaಜಿಬಿಎ ಚುನಾವಣೆ ಗೆಲುವಿಗೆ ಹೊಸ ಲೆಕ್ಕಾಚಾರ ಶುರು, ಏನದು? GBA Elections

ಜಿಬಿಎ ಚುನಾವಣೆ ಗೆಲುವಿಗೆ ಹೊಸ ಲೆಕ್ಕಾಚಾರ ಶುರು, ಏನದು? GBA Elections

ಕರ್ನಾಟಕದ ನಾಯಕತ್ವ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೆಲುವು ಕಂಡಿದ್ದು, ಇನ್ನೇನು ನಿಟ್ಟುಸಿರು ಬಿಡಬಹುದು ಎನ್ನುವಷ್ಟರಲ್ಲಿ ಹೊಸ ಸಮಸ್ಯೆ ಶುರುವಾಗಿದೆ. ಒಂದು ಕಡೆ ಸಚಿವ ಸ್ಥಾನ ಸಿಗದೇ ಇರುವ ಶಾಸಕರ ಸಿಟ್ಟು, ಮತ್ತೊಂದು ಕಡೆ ನಮಗೆ ಬೇಕಾದ ಖಾತೆ ಸಿಕ್ಕಿಲ್ಲ ಎಂಬ ಆಕ್ರೋಶ ಪಕ್ಷದೊಳಗೆ ಈ ಸಮಯದಲ್ಲಿ ಮೊಳಗುತ್ತಿದೆ. ಆದರೆ ಇದೆಲ್ಲವನ್ನೂ ಹೈಕಮಾಂಡ್ ನಾಯಕರು ಸಮರ್ಥವಾಗಿ ಎದುರಿಸಿ, ಆ ಮೂಲಕ ಜಿಬಿಎ ಚುನಾವಣೆಗೆ ಕೂಡ ಸಜ್ಜಾಗಬೇಕಾದ ಅನಿವಾರ್ಯತೆ ಇದೆ. ಇಂತಹ ಸಮಯದಲ್ಲೇ ಜಿಬಿಎ ಚುನಾವಣೆ ಗೆಲುವಿಗೆ ಹೊಸ ಲೆಕ್ಕಾಚಾರ ಶುರು, ಏನದು?

ಒಂದು ಕಾಲ ಇತ್ತು, ಕಾಂಗ್ರೆಸ್ ಹೈಕಮಾಂಡ್ ನಾಯಕರು ಹೇಳಿದ ಮಾತಿಗೆ ಯಾವುದೇ ರಾಜ್ಯದ & ಯಾವ ದೊಡ್ಡ ನಾಯಕನೇ ಇರಲಿ ಮರು ಮಾತನಾಡದೇ ಯೆಸ್ ಎನ್ನುತ್ತಿದ್ದರು. ಆದರೆ ಕಾಂಗ್ರೆಸ್ ಯಾವಾಗ ಇಡೀ ದೇಶದಲ್ಲಿ ಶಕ್ತಿ ಕಳೆದುಕೊಂಡು, ಒಂದು ಹಂತದಲ್ಲಿ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿತೋ ಆಗಿಂದ ಬೇರೆ ಲೆಕ್ಕಾಚಾರ ಶುರುವಾಗಿದೆ. ಪ್ರತಿಯೊಂದು ವಿಚಾರಕ್ಕೂ ರಾಜ್ಯಗಳ ನಾಯಕರನ್ನು ಓಲೈಸುವ & ಆ ಮೂಲಕ ಬಂಡಾಯ ಶಮನ ಮಾಡಲು ಪರದಾಡುತ್ತಿದ್ದಾರೆ ಕಾಂಗ್ರೆಸ್ ಹೈಕಮಾಂಡ್ ನಾಯಕರು. ಹೀಗೆ ಇದ್ದಾಗ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅದಕ್ಕೆ ಅವಕಾಶ ಕೊಡದೆ ನಾಯಕತ್ವ ಬಿಟ್ಟುಕೊಟ್ಟಿದ್ದಾರೆ. ಆದರೆ ಇದೇ ಸಮಯದಲ್ಲಿ ಹೊಸ ಸವಾಲು ಕೂಡ ಎದುರಾಗಿದೆ ಹೈಕಾಮಾಂಡ್‌ಗೆ.

GBA Elections And This Is What Congress Can Make Changes While Giving Ticket
ಜಿಬಿಎ ಚುನಾವಣೆ ಗೆಲುವಿಗೆ ಹೊಸ ಲೆಕ್ಕಾಚಾರ ಶುರು, ಏನದು?

ಜಿಬಿಎ ಚುನಾವಣೆಗೆ ಹೊಸ ಮುಖಗಳು?
ದೇಶದಲ್ಲಿ ಯುವ ಜನಾಂಗ ಸಂಚಲನ ಸೃಷ್ಟಿ ಮಾಡುತ್ತಿದ್ದು, ಈಗಾಗಲೇ ಭಾರತದಲ್ಲಿ ಅಕ್ಕಪಕ್ಕದಲ್ಲಿ ಇರುವ ದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಕ್ರಾಂತಿ ನಡೆದಿದೆ. ಇದೇ ರೀತಿಯಾಗಿ ಭಾರತದಲ್ಲಿ ಕೂಡ ಕ್ರಾಂತಿ ಆಗುತ್ತಾ? ಎಂಬ ಚರ್ಚೆಗಳ ನಡುವೆ, ಕಾಂಗ್ರೆಸ್ ಹೈಕಮಾಂಡ್ ಯುವಕರಿಗೆ ಮಣೆ ಹಾಕುವ ಮೂಲಕ, ಹೊಸ ತಂತ್ರದ ಮೊರೆ ಹೋಗಿದೆ. ಅದೇ ರೀತಿ ಬರೋಬ್ಬರಿ 11 ವರ್ಷಗಳ ನಂತರ ನಡೆಯುತ್ತಿರುವ ಬೆಂಗಳೂರಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೂಡ ಯುವಕರಿಗೆ ಮಣೆಹಾಕುವ ಮುನ್ಸೂಚನೆ ಸಿಗುತ್ತಿದೆ. ಇದರ ಜೊತೆಯಲ್ಲಿ ಈಗ ಹಿರಿಯ ನಾಯಕರ ಬಂಡಾಯದ ಬಗ್ಗೆ ಕೂಡ ಆತಂಕ ಶುರುವಾಗಿದೆ. ಒಟ್ಟು 369 ವಾರ್ಡ್‌ಗಳಿಗೆ ಈಗ ಚುನಾವಣೆ ನಡೆಸಲು ಸಕಲ ಸಿದ್ಧತೆಗಳನ್ನೂ ಕೈಗೊಳ್ಳಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಂತ್ರಿ ಪಟ್ಟಕ್ಕಾಗಿ ಫುಲ್ ಫೈಟ್?
ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರದ ಪ್ರಕಾರ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಬಹುತೇಕ ಹೊಸ ಎಂದರೆ ಯುವ ಶಾಸಕರಿಗೆ ಅವಕಾಶ ಸಿಗಬೇಕಿತ್ತು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಹತ್ತಾರು ವರ್ಷಗಳಿಂದ ಭಾರಿ ಹಿಡಿತ ಹೊಂದಿರುವ ಹಿರಿಯ ನಾಯಕರು ಅದಕ್ಕೆ ಅವಕಾಶ ಕೊಟ್ಟಿಲ್ಲ ಎಂಬುದು ವಿಪಕ್ಷಗಳ ಆರೋಪವೂ ಆಗಿದೆ. ಹೀಗಿದ್ದಾಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಯಲ್ಲಿ ಯುವಕರಿಗೆ ಟಿಕೆಟ್ ನೀಡಲು, ಆ ಮೂಲಕ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಹಿರಿಯ ನಾಯಕರು ಬಿಡುತ್ತಾರಾ? ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ.

5 ಪಾಲಿಕೆಗಳಿಗೆ ಚುನಾವಣೆ ಪಕ್ಕಾ
ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗುತ್ತಿದ್ದಂತೆ, ಜಿಬಿಎ ಚುನಾವಣೆ ಭಾರಿ ದೊಡ್ಡ ಸದ್ದು ಮಾಡುತ್ತಿದೆ. ಸಿದ್ದರಾಮಯ್ಯ ಅವರ ಸರ್ಕಾರ ಕೆಲ ದಿನಗಳ ಹಿಂದಷ್ಟೇ ಜಿಬಿಎ ಚುನಾವಣೆಯನ್ನ ನಡೆಸಲು 3 ತಿಂಗಳ ಕಾಲಾವಕಾಶ ಕೇಳಿ ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆ 3 ತಿಂಗಳ ಕಾಲಾವಕಾಶ ಕೇಳಿದ್ದ ರಾಜ್ಯ ಸಕಾ೯ರಕ್ಕೆ 2 ತಿಂಗಳ ರಿಲೀಫ್ ಸಿಕ್ಕಿತ್ತು. ಅಲ್ಲದೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದ್ದು, 2026ರ ಆಗಸ್ಟ್ 31ರ ಒಳಗೆ ಎಲೆಕ್ಷನ್ ನಡೆಸಲು ಸುಪ್ರೀಂ ಸೂಚಿಸಿದೆ. ಹೀಗಿದ್ದಾಗಲೇ ಟಿಕೆಟ್ ಲೆಕ್ಕಾಚಾರ ಕೂಡ ಜೋರಾಗಿದ್ದು, 369 ವಾರ್ಡ್‌ಗಳಿಗೆ ನಡೆಯುವ ಚುನಾವಣೆ ಗೆಲ್ಲಲು ಕಾಂಗ್ರೆಸ್‌ನ ನಾಯಕರು ತಂತ್ರ ಹೆಣೆಯುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular