ಗಮನಿಸಿ : LPG ಗ್ಯಾಸ್ ಸಬ್ಸಿಡಿ 200 ರೂ. ಖಾತೆಗೆ ಬಂದಿದ್ಯೋ..ಇಲ್ವೋ ಎಂದು ಜಸ್ಟ್ ಹೀಗೆ ಚೆಕ್ ಮಾಡಿ

ಕೇಂದ್ರ ಸರ್ಕಾರ ಗ್ಯಾಸ್ ಸಬ್ಸಿಡಿ ಹಣ 200 ರೂ. ನೀಡುವುದಾಗಿ ತಿಳಿಸಿದೆ. ಹೌದು, ಗೃಹ ಬಳಕೆಯ LPG ಸಿಲಿಂಡರ್ ಗೆ 200ರೂ. ಹಾಗೂ ಉಜ್ವಲ ಯೋಜನೆಯಡಿ ಸಿಲಿಂಡರ್ ಸೌಲಭ್ಯ ಪಡೆದಿರುವವರಿಗೆ ಈಗಾಗಲೇ ಸಿಗುತ್ತಿರುವ 200ರೂ. ಸಹಾಯಧನ ಜೊತೆಗೆ ಹೆಚ್ಚುವರಿ 200ರೂ. ಅಂದರೆ ಒಟ್ಟಾರೆಯಾಗಿ 400ರೂ. ಸಬ್ಸಿಡಿ ಸಿಗಲಿದೆ.

LPG ಸಬ್ಸಿಡಿ ಹಣ ಬಂದಿರುವುದನ್ನು ಮೊಬೈಲ್ ಮೂಲಕವೇ ನೀವು ಹೀಗೆ ಚೆಕ್ ಮಾಡಬಹುದು
ಹಂತ 1 : ಮೊದಲು ನೀವು https://www.mylpg.in ವೆಬ್ ಸೈಟ್ ಗೆ ಭೇಟಿ ನೀಡಬೇಕು . ಇದರಲ್ಲಿ ಎಲ್ಲಾ LPG ಕಂಪನಿಗಳ ಹೆಸರು ಇರುತ್ತದೆ. ಇದರಲ್ಲಿ ನಿಮ್ಮ ಮನೆಗೆ ಬರುತ್ತಿರುವ ಸಿಲಿಂಡರ್ ಕಂಪನಿ ಯಾವುದು ಅದನ್ನು ಸೆಲೆಕ್ಟ್ ಮಾಡಬೇಕು.

ಹಂತ 2: ನಿಮ್ಮ ಆಯ್ಕೆ ಭಾಷೆ ಕನ್ನಡ ಆಗಿದ್ದರೆ ಭಾಷೆಗಳು ಆಯ್ಕೆಯಲ್ಲಿ ಕನ್ನಡ ಎನ್ನುವುದನ್ನು ಸೆಲೆಕ್ಟ್ ಮಾಡಿ

ಹಂತ 3 : ನೀವು ಹೊಸ ಬಳಕೆದಾರ ಎಂದು ಇರುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮಗೆ LPG ಗ್ರಾಹಕ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಎಂಟ್ರಿ ಮಾಡಿ ಮುಂದುವರೆಯಿರಿ.

ಹಂತ 4 : ನಂತರ ಮೊಬೈಲ್ ಗೆ OTP ಬರುತ್ತದೆ, ನಂತರ ಮತ್ತೆ Click here to generate OTP ಎನ್ನುವ ಆಯ್ಕೆ ಕಾಣುತ್ತದೆ, ಅದರ ಮೇಲೆ ಮೇಲೆ ಕ್ಲಿಕ್ ಮಾಡಿ.ಮತ್ತೊಂದು ಒಟಿಪಿ ಬರುತ್ತದೆ ಅದನ್ನು ಕೂಡ ಎಂಟ್ರಿ ಮಾಡಿ.

ಹಂತ 5 : ಬಳಕೆದಾರರ ID ಮತ್ತು Password create ಆಪ್ಷನ್ ಇರುತ್ತದೆ ಅದನ್ನು ಕಂಪ್ಲೀಟ್ ಮಾಡಿ.

ಹಂತ 6 : ನೀವು ಕ್ರಿಯೇಟ್ ಮಾಡಿದ ID ಮತ್ತು Password ಬಳಸಿ ಲಾಗಿನ್ ಆಗಿರಿ.

ಹಂತ 7 : ಲಾಗಿನ್ ಆಗಿ ಮೆನುಗೆ ಹೋದರೆ ಸಿಲಿಂಡರ್ ಬುಕಿಂಗ್ ಹಿಸ್ಟರಿ ಸಿಗುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ

ಹಂತ 8 : ಇದನ್ನು ಕ್ಲಿಕ್ ಮಾಡಿದ ಕೂಡಲೇ ನೀವು ಯಾವಾಗ ಸಿಲಿಂಡರ್ ಬುಕ್ ಮಾಡಿದ್ದೀರಾ, ಆ ಬುಕಿಂಗ್ ನಿಮಗೆ ಎಷ್ಟು ಸಬ್ಸಿಡಿ ಹಣ ಬಂದಿದೆ, ಯಾವ ಖಾತೆಗೆ ಜಮೆ ಆಗಿದೆ ಎನ್ನುವ ಸಂಪೂರ್ಣ ಡಿಟೇಲ್ಸ್ ನಿಮಗೆ ಸಿಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read