ಶ್ರೀಮಂತಿಕೆಯ ಮದವೇರಿದಾಗ ತಾವು ಏನು ಮಾಡುತ್ತೇವೆ ಎನ್ನುವ ಅರಿವು ಕೆಲವರಿಗೆ ಇರುವುದಿಲ್ಲ. ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಐಷಾರಾಮಿ ಕಾರು ಮಾಲೀಕರೊಬ್ಬರು ಪೆಟ್ರೋಲ್ ಹಾಕಿಸಿಕೊಳ್ಳಲು ಬಂದು, ನಂತರ ಮಹಿಳಾ ಸಿಬ್ಬಂದಿಯತ್ತ ಪೆಟ್ರೋಲ್ನ ದುಡ್ಡು ಎಸೆದು ದರ್ಪ ಮರೆದಿದ್ದಾನೆ.
ಕೆಳಕ್ಕೆ ಬಿದ್ದ ದುಡ್ಡನ್ನು ಹೆಕ್ಕಿಕೊಂಡ ಮಹಿಳಾ ಸಿಬ್ಬಂದಿಗೆ ದುಃಖ ತಡೆದುಕೊಳ್ಳಲು ಆಗದೇ ಇನ್ನೊಂದು ಬದಿಗೆ ಬಂದು ಕಣ್ಣೀರು ಒರೆಸಿಕೊಂಡಿದ್ದಾಳೆ. ಇದರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಚೀನಾದಲ್ಲಿ ಈ ಘಟನೆ ನಡೆದಿದ್ದು, ವಾಹನ ಚಾಲಕನ ವರ್ತನೆ ಇಂಟರ್‌ನೆಟ್‌ನಲ್ಲಿ ಆಕ್ರೋಶ ಮೂಡಿಸಿದೆ. ಈ ವಿಡಿಯೋವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಸಂಪೂರ್ಣವಾಗಿ ಅಸಹ್ಯಗೊಂಡಿದ್ದಾರೆ.
50 ಸೆಕೆಂಡ್‌ಗಳ ವಿಡಿಯೋದಲ್ಲಿ ಕೆಲಸಗಾರ್ತಿಯೊಬ್ಬಳು ಪುರುಷನ ಐಷಾರಾಮಿ ಕಾರಿಗೆ ಪೆಟ್ರೋಲ್ ಗ್ಯಾಸ್ ತುಂಬಿಸುತ್ತಿರುವುದನ್ನು ಕಾಣಬಹುದು. ಅದಾದ ಮೇಲೆ ದುಡ್ಡನ್ನು ಕೇಳಿದಾಗ ಆತ ಅದನ್ನು ಎಸೆದಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆಗೆ ದುಃಖವಾಗಿರುವುದು ಸ್ಪಷ್ಟವಾಗಿ ಸಿಸಿಟಿವಿಯಲ್ಲಿ ಕಾಣಿಸುತ್ತಿದೆ.
https://youtu.be/4jsEzGZm-6I
Throwing money on the ground for gas station worker.
byu/mindyour inMadeMeCry