ಕೂಲರ್ ಸ್ವಚ್ಛಗೊಳಿಸುವಾಗ ಅನಿಲ ಸೋರಿಕೆ: ಕಾರ್ಮಿಕ ಸಾವು

ಕೊಪ್ಪಳ: ಕೊಪ್ಪಳ ತಾಲೂಕಿನ ಅಲ್ಲಾ ನಗರ ಸಮೀಪದ ಹೊಸಪೇಟೆ ಇಸ್ಪಾಟ್ ಕಾರ್ಖಾನೆಯಲ್ಲಿ ಮಂಗಳವಾರ ಕೂಲರ್ ಸ್ವಚ್ಛಗೊಳಿಸುವಾಗ ಸೋರಿಕೆಯಾದ ಕಾರ್ಬನ್ ಮೊನಾಕ್ಸೈಡ್ ಅನಿಲ ಸೇವಿಸಿದ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.

ಮಾರುತಿ ಕೋರಗಲ್(24) ಮೃತಪಟ್ಟ ಕಾರ್ಮಿಕ. ಕೂಲರ್ ಘಟಕವನ್ನು ಸ್ವಚ್ಛಗೊಳಿಸಲು ಇಬ್ಬರು ಕಾರ್ಮಿಕರು ತೆರಳಿದ್ದ ವೇಳೆ ಕಾರ್ಬನ್ ಮೊನಾಕ್ಸೈಡ್ ಸೋರಿಕೆಯಾಗಿದೆ. ಅನಿಲ ಸೇವಿಸಿ ಅಸ್ವಸ್ಥರಾಗಿದ್ದ ಮಾರುತಿ ಮತ್ತು ಮಹಾಂತೇಶ ಕೆಳಗೆ ಬಿದ್ದಿದ್ದು, ಮತ್ತೊಂದು ಯೂನಿಟ್ ನಲ್ಲಿದ್ದ 9 ಕಾರ್ಮಿಕರು ಇವರ ರಕ್ಷಣೆಗೆ ಧಾವಿಸಿದ್ದಾರೆ. ಅವರು ಕೂಡ ಅನಿಲ ಸೇವಿಸಿ ಅಸ್ವಸ್ಥರಾಗಿದ್ದಾರೆ.

ಈ ನಡುವೆಯೂ ಮೊದಲಿಬ್ಬರು ಕಾರ್ಮಿಕರನ್ನು ಹೊರಗಡೆಗೆ ತಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲೇ ಮಾರುತಿ ಮೃತಪಟ್ಟಿದ್ದಾರೆ. ಮಹಾಂತೇಶ ಸ್ಥಿತಿ ಚಿಂತಾಜನಕವಾಗಿದೆ. ಅಸ್ವಸ್ಥರಾಗಿದ್ದ ಉಳಿದ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಕಾರ್ಖಾನೆ ಮಾಲೀಕರು ಮತ್ತು ವ್ಯವಸ್ಥಾಪಕರ ವಿರುದ್ಧ ಕೇಸು ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read