ನವದೆಹಲಿ: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡಿದ್ದ ಕೇಂದ್ರ ಸರ್ಕಾರ ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್ ನೀಡಿದೆ. ಅಡುಗೆ ಅನಿಲ ದರದಲ್ಲಿ ಭಾರಿ ಏರಿಕೆಯಾಗಿದೆ. ಇದರ ಜೊತೆಗೆ ಉಜ್ವಲ ಯೋಜನೆಯಡಿಯಲ್ಲಿ ಸಿಗುವ ಸಿಲಿಂಡರ್ ದರವೂ ಹೆಚ್ಚಳವಾಗಿದೆ.
ಅಡುಗೆ ಅನಿಲ ದರ 50 ರೂಪಾಯಿ ಏರಿಕೆ ಮಾಡಲಾಗಿದೆ. ಉಜ್ವಲ ಯೋಜನೆಯಡಿಯಲ್ಲಿ ಸಿಗುವ ಸಿಲಿಂಡರ್ ದರವೂ 50 ರೂಪಾಯಿ ಹೆಚ್ಚಳವಾಗಿದೆ. ಉಜ್ವಲ ಯೋಜನೆಯಡಿ 500 ರೂಪಾಯಿಗೆ ಸಿಲಿಂಡರ್ ನೀಡಲಾಗುತ್ತಿತ್ತು. ಇನ್ಮುಂದೆ ಉಜ್ವಲ ಯೋಜನೆಯ ಸಿಲಿಂಡರ್ ೫೫೦ ರೂಪಾಯಿ ಆಗಲಿದೆ.
ಒಟ್ಟಾರೆ ದೇಶದಲ್ಲಿ ದುಬಾರಿ ದುನಿಯಾ ಆರಂಭವಾಗಿದೆ, ಎರಡು ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರ ಡೀಸೆಲ್ ಮಾರಾಟ ತೆರಿಗೆ ಹೆಚ್ಚಳ ಮಾಡಿತ್ತು. ಇದರ ಬೆನ್ನಲ್ಲೇ ಇಂದು ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಲೀತರ್ ಗೆ 2 ರೂಪಾಯಿಯಂತೆ ಹೆಚ್ಚಳ ಮಾಡಿದೆ. ಇದೀಗ ಅಡುಗೆ ಅನಿಲ ದರವನ್ನು ಏರಿಕೆ ಮಾಡುವ ಮೂಲಕ ರಾಜ್ಯದ ಬೆನ್ನಲ್ಲೇ ಕೇಂದ್ರ ಸರ್ಕಾರವೂ ಜನರಿಗೆ ಬೆಲೆ ಏರಿಕೆ ಬರೆ ಎಳೆದಿದೆ.