ಬೆಂಗಳೂರು: ಮೆಟ್ರೋ ಸ್ಟೇಷನ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವತಿ ಸೇರಿ ನಾಲ್ವರು ಆರೋಪಿಗಳನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.
ಒಡಿಶಾ ಮೂಲದ ಸಂಪತ್ ಪ್ರಧಾನ್ (23), ತಪಾಶ್ ಪ್ರಧಾನ್ (22), ಜಗನ್ ಪತಂಜಿ (24) ಹಾಗೂ ದೀಪಾಂಜಲಿ (22) ಬಂಧಿತ ಆರೋಪಿಗಳು.
ರಾಜಾಜಿನಗರ ಮೆಟ್ರೋ ಸ್ಟೇಷನ್ ಬಳಿ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ 30 ಲಕ್ಷ ರೂ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ.
ಆರೋಪಿಗಳ ವಿರುದ್ಧ NDPS ಆಕ್ಟ್ 1985ರ ಅಡಿ ಪ್ರಕರಣ ದಾಖಲಾಗಿದೆ.