ಮೈಸೂರು: ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಕೈದಿಗಳಿಗೆ ಗಾಂಜಾ ಪೂರೈಕೆ ಪ್ರಕರಣ ದಿನದಿಂದ ದಿನಕ್ಕೆ ಬೆಳಕಿಗೆ ಬರುತ್ತಿದೆ. ಪೇಸ್ಟ್ ರೂಪದಲ್ಲಿ ಕೈದಿಗಳಿಗೆ ಜೈಲಿನ ಸಿಬ್ಬಂದಿಗಳೇ ಗಾಂಜಾ ಪೂರೈಸುತ್ತಿದ್ದ ಘಟನೆ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ಕೆ.ಎಸ್.ಐ.ಎಸ್.ಎಫ್ ಸಿಬ್ಬಂದಿಯೇ ಕಾರಾಗೃಹದ ಕೈದಿಗಳಿಗೆ ಪೇಸ್ಟ್ ರೂಪದಲ್ಲಿ ಗಾಂಜಾ ಪೂರೈಸುತ್ತಿದ್ದರು. ಪ್ಯಾಂಟ್ ಬೆಲ್ಟ್ ನಲ್ಲಿ ಪೇಸ್ಟ್ ರೂಪದಲ್ಲಿ ಮಾದಕ ವಸ್ತುಗಳನ್ನಿಟ್ಟು ಸಾಗಿಸಿ, ಅದನ್ನು ಜೈಲಿನಲ್ಲಿರುವ ಕೈದಿಗಳಿಗೆ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಎಂದಿನಂತೆ ಜೈಲಿನ ಮುಖ್ಯದ್ವಾರದ ಬಳಿ ತಪಾಸಣೆ ನಡೆಸಿದಾಗ ಕೆ.ಎಸ್.ಐ.ಎಸ್.ಎಫ್ ಸಿಬ್ಬಂದಿಯ ಪ್ಯಾಂಟ್ ಬೆಲ್ಟ್ ನಲ್ಲಿ ಗಾಂಜಾ ಪೇಸ್ಟ್ ಪತ್ತೆಯಾಗಿದೆ. ಒಟ್ಟು 6 ಗಾಂಜಾ ಪೇಸ್ಟ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
